ರಾಜ್ಯ

ಬೆಂಗಳೂರು: 17 ವಯಸ್ಸಿನಲ್ಲಿಯೇ ಬೇಕಿಂಗ್ ಕಂಪನಿ ಸ್ಥಾಪಿಸಿದ ಪೋರ !

ಇತ್ತೀಚಿಗೆ ಆಯೋಜಿಸಲಾಗಿದ್ದ ಐಐಹೆಚ್ ಎಂ ಉತ್ತಮ ಬಾಣಸಿಗ ಪ್ರಶಸ್ತಿ ಪಡೆದ ನಂತರ ಬೆಂಗಳೂರು ಮೂಲದ 17 ವರ್ಷದ ಯುವಕ ಜಹಾನ್ ಗಪೂರ್ ತನ್ನದೇ ಆದ ಸ್ವಂತ ಬೇಕಿಂಗ್ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.

ಬೆಂಗಳೂರು:  17 ವಯಸ್ಸಿನಲ್ಲಿಯೇ  ಬೇಕಿಂಗ್ ಕಂಪನಿ ಸ್ಥಾಪಿಸಿದ ಪೋರ !
ಜಹಾನ್ ಗಪೂರ್
Published On :

ಬೆಂಗಳೂರು: ಇತ್ತೀಚಿಗೆ ಆಯೋಜಿಸಲಾಗಿದ್ದ  ಐಐಹೆಚ್ ಎಂ ಉತ್ತಮ ಬಾಣಸಿಗ ಪ್ರಶಸ್ತಿ ಪಡೆದ ನಂತರ ಬೆಂಗಳೂರು ಮೂಲದ 17 ವರ್ಷದ ಯುವಕ  ಜಹಾನ್ ಗಪೂರ್  ತನ್ನದೇ ಆದ ಸ್ವಂತ  ಬೇಕಿಂಗ್ ಕಂಪನಿಯೊಂದನ್ನು  ಸ್ಥಾಪಿಸಿದ್ದಾರೆ.

ಬ್ರೇಡ್ ಅಂಡ್ ಬಟ್ಟರ್ ಬೇಕಿಂಗ್ ಕಂಪನಿ  ಆರಂಭಗೊಂಡು ವಾರ ಕಳೆಯುವಷ್ಟರಲ್ಲಿ 50 ಆರ್ಡರ್ ಗಳನ್ನು ಪಡೆದುಕೊಂಡಿದೆ.  17 ವರ್ಷದ ಈ ಯುವಕ ವ್ಯಾಸಂಗ ಹಾಗೂ ಕೆಲಸದ ನಡುವೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದು, ಇದು ಕೆಲಸವಲ್ಲ, ನನ್ನ ಫ್ಯಾಶನ್ ಎಂದು  ಹೇಳುತ್ತಾರೆ. ಆಹಾರೊದ್ಯಮದಲ್ಲಿ ಯಾವುದು ಸವಾಲು  ಇಲ್ಲ. ಇದೊಂದು ರೀತಿಯಲಲಿ ಪುಟ್ಬಾಲ್ ಇದ್ದ ಹಾಗೆ ಎಂದು ಅವರು ಖುಷಿಯಿಂದ ಹೇಳುತ್ತಾರೆ.

ಶಾಲೆಯಿಂದ ಮನೆಗೆ ಹೋದ ಬಳಿಕ ಜಹಾನ್ ತನ್ನ ಮೊಬೈಲ್ ನಲ್ಲಿಯೇ ಆರ್ಡರ್  ಹಾಗೂ ಸ್ಥಳವನ್ನು ಆನ್ ಲೈನ್ ನಿಂದಲೇ ಚೆಕ್ ಮಾಡುತ್ತಾರೆ. ನಂತರ ಅವರು ಮನೆಗೆ ತಲುಪುವಷ್ಟರಲ್ಲಿ ಸಾಮಾಗ್ರಿಗಳನ್ನು ತಂದು ಹಾಕಿರುವಂತೆ ಸಹಾಯಕರಿಗೆ ತಿಳಿಸುತ್ತಾರೆ. ನಂತರ  ಅಡುಗೆ ಸಿದ್ದಗೊಳ್ಳುವುದರಲ್ಲಿ ಹೋಮ್ ವರ್ಕಿಂಗ್ ಮುಗಿಸಿಕೊಳ್ಳುತ್ತಾರೆ. ಇದೆಲ್ಲಾ ಆದ ನಂತರ ಆಪ್ ಮೂಲಕ ಆರ್ಡರ್  ಡೆಲಿವರಿ ಮಾಡುತ್ತಾರೆ.
ಪೈಪೋಟಿ  ಸ್ವಂತ ಕಂಪನಿ ಸ್ಥಾಪಿಸಲು ತಮ್ಮಗೆ ಸ್ಪೂರ್ತಿ ನೀಡಿತ್ತು. ಸಮಯ ನಿರ್ವಹಣೆಯನ್ನು ಕಲಿತೆ ಎಂದು ತಿಳಿಸುವ ಜಹಾನ್, ಮುಂದಿನ ವಾರ ವಿಡಿಯೋ ಚಾರಿಟಿ ಆರಂಭಿಸಲು ಯೋಚಿಸಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.