ಕಾರ್ಮಿಕ ಸಚಿವ ವೆಂಕಟರಮಣಪ್ಪ, ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಸೇರಿದಂತೆ ಕೆಲ ಸಚಿವರು ಮಧ್ಯಾಹ್ನ ಕಚೇರಿಗೆ ಆಗಮಿಸಿದರು, ಈ ವೇಳೆ ಕಚೇರಿಯ ಬಾಲಿ ಮುಂದೆ ತೆಂಗಿನಕಾಯಿ ಒಡೆಯಲಾಯಿತು. ಅರ್ಚಕರು ಕಚೇರಿಯೊಳಗೆ ಪೂಜೆ ಮಾಡಿ ಪ್ರಸಾದ ಹಂಚಿದರು. ಪೂಜೆ ನಂತರ ಬೂದು ಗುಂಬಳಕಾಯಿ ಒಡೆದು ಶುಭ ಮುಹೂರ್ತದಲ್ಲಿ ಕಚೇರಿ ಪ್ರವೇಶಿಸಿದನ್ನು ಮರೆಯಲಿಲ್ಲ, ಕೆ.ಜೆ ಜಾರ್ಜ್ ಸೇರಿದಂತೆ ಇನ್ನೂ ಹಲವು ಸಚಿವರು ಇನ್ನೂ ಕಚೇರಿ ಕಡೆ ತಲೆ ಹಾಕಲಿಲ್ಲ.