ಲೇಡೀಸ್ ಬಾರ್, ಲೈವ್ ಬ್ಯಾಂಡ್ಸ್ ಮುಚ್ಚಬೇಕೆಂದು ವಿಹೆಚ್‍ಪಿ, ಭಜರಂಗ ದಳ ಆಗ್ರಹ

ಲೇಡೀಸ್ ಬಾರ್, ಲೈವ್ ಬ್ಯಾಂಡ್ಸ್ ಮುಚ್ಚಬೇಕು ಎಂದು ವಿಶ್ವಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳ ಆಗ್ರಹಿಸಿವೆ...
ಲೈವ್ ಬ್ಯಾಂಡ್
ಲೈವ್ ಬ್ಯಾಂಡ್
ಮಂಗಳೂರು: ಲೇಡೀಸ್ ಬಾರ್, ಲೈವ್ ಬ್ಯಾಂಡ್ಸ್ ಮುಚ್ಚಬೇಕು ಎಂದು ವಿಶ್ವಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳ ಆಗ್ರಹಿಸಿವೆ. 
ಮಸಾಜ್ ಪಾರ್ಲರ್ಗಳು ಮತ್ತು ಪಬ್ ಗಳು ಸಾಂಸ್ಕೃತಿಕ ಶ್ರೀಮಂತ ನಗರಗಳ ಸಭ್ಯತೆಯನ್ನು ಹಾಳು ಮಾಡುವ ಸಾಧ್ಯತೆಗಳು ಹೆಚ್ಚಿರುವುದರಿಂದ ಸದ್ಯ ಇರುವ ಲೇಡೀಸ್ ಬಾರ್ ಮತ್ತು ಲೈವ್ ಬ್ಯಾಂಡ್ಸ್ ಗಳ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಹೊಸದಕ್ಕೆ ಅನುಮತಿ ನಿರಾಕರಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. 
ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿರುವ ಇಂತರ ಪಬ್ ಮತ್ತು ಲೈವ್ ಬ್ಯಾಂಡ್ ಗಳನ್ನು ಮುಚ್ಚಿಸದೆ ಹೋದರೆ ಮತ್ತೆ ಪಬ್ ಗಳ ಮೇಲೆ ದಾಳಿಗಳಾಗುವ ಸಾಧ್ಯತೆಗಳಿವೆ ಎಂದು ವಿಹೆಚ್ಪಿ ಮಹಿಳಾ ಘಟಕದ ಮುಖ್ಯಸ್ಥೆ ಆಶಾ ಜಗದೀಶ್ ಹೇಳಿದ್ದಾರೆ. 
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಲೇಡೀಸ್ ಬಾರ್ ಮತ್ತು ಲೈವ್ ಬ್ಯಾಂಡ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ಈ ಎರಡು ಸಂಘಟನೆಗಳ ಮಹಿಳಾ ಕಾರ್ಯಕರ್ತರು ಭಾರೀ ಪ್ರತಿಭಟನೆ ಮಾಡುವ ಬೆದರಿಕೆ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com