ಕುಕ್ಕೆಸುಬ್ರಹ್ಮಣ್ಯ ಮಾರ್ಗಮಧ್ಯೆ ಯಾತ್ರಿಕರ ಮೇಲೆ ಕಾಡಾನೆ ದಾಳಿ: 6 ಮಂದಿಗೆ ಗಾಯ, ಕಾರು ಜಖಂ

ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ....
ಕಾಡಾನೆ ದಾಳಿಯಿಂದ ಜಖಂಗೊಂಡ ಕಾರು
ಕಾಡಾನೆ ದಾಳಿಯಿಂದ ಜಖಂಗೊಂಡ ಕಾರು
ಮಂಗಳೂರು: ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ   ಕಾಡಾನೆ ದಾಳಿ ನಡೆಸಿದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.
ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಡೂರು ಮೂಲದ ಯಾತ್ರಾರ್ಥಿಗಳಿದ್ದ ಮಾರುತಿ ಓಮ್ನಿ ಕಾರು ಬಿಳಿನೆಲೆ ಸಮೀಪ ತಲುಪಿದಾಗ ಕಾಡಾನೆ ರಸ್ತೆಯನ್ನು ದಾಟುತ್ತಿತ್ತು. 
ಆನೆಯನ್ನು ಧಿಡೀರ್‌ ಕಂಡ ಚಾಲಕ ಆನೆಯ ಸಮೀಪದಲ್ಲೇ ಕಾರನ್ನು ನಿಲ್ಲಿಸಿದ್ದಾರೆನ್ನಲಾಗಿದೆ. ಈ ಸಂದರ್ಭದಲ್ಲಿ ಕಾಡಾನೆಯು ಹಿಂತಿರುಗಿ ಬಂದು ಸೊಂಡಿಲಿನಿಂದ ಕಾರಿನ ಮೇಲೆ ದಾಳಿ ಮಾಡಿದೆ. 
ಆನೆ ದಾಳಿಗೆ ಸಿಲುಕಿ ಆರು ಮಂದಿ ಯಾತ್ರಿಕರು ಗಾಯಗೊಂಡಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಮಾರುತಿ ಆಮ್ನಿ ವ್ಯಾನ್‌ ಸಂಪೂರ್ಣ ಜಖಂಗೊಂಡಿದೆ. 
ಕಾರಿನಲ್ಲಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು. ಯಾತ್ರಿಕರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನವರಾಗಿದ್ದಾರೆ. ಇದೇ ವೇಳೆ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಬಂದು ಜೋರಾಗಿ ಹಾರ್ನ್ ಮಾಡಿದ ಪರಿಣಾಮ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com