ಬೆಂಗಳೂರು: ತಂದೆಯಿಂದಲೇ ಮಗಳ ಮೇಲೆ ಲೈಂಗಿಕ ಕಿರುಕುಳ

12 ವರ್ಷದ ಬಾಲಕಿಯೊಬ್ಬಳು ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ಬೆಂಗಳೂರಿನ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು; 12 ವರ್ಷದ ಬಾಲಕಿಯೊಬ್ಬಳು ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ಬೆಂಗಳೂರಿನ ಕೋತನೂರು ಸಮೀಪ ನಡೆದಿದೆ. ಬಾಲಕಿ ತಂದೆಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದಳು.

ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಲಾಯಿತು. ಆರೋಪಿ ತಂದೆ ತಲೆಮರೆಸಿಕೊಂಡಿದ್ದಾನೆ.
ಸಯೀದ್ ಇಸ್ಮಾಯಿಲ್ ಎಂಬಾತ ಆರೋಪಿಯಾಗಿದ್ದು ಈತ ವೃತ್ತಿಯಲ್ಲಿ ಲೇಡಿಸ್ ಟೈಲರ್. ಈತನ ಮಗಳು ಸರ್ಕಾರಿ ಶಾಲೆಯೊಂದರಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ಇಬ್ರಾಹಿಂ ಮಧ್ಯಾಹ್ನ ಊಟಕ್ಕೆ ಬಂದಿದ್ದ ವೇಳೆ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಆಕೆಯ ಖಾಸಗಿ ಗುಪ್ತಾಂಗಗಳನ್ನು ಮುಟ್ಟಲಾರಂಭಿಸಿದನು. ಬಾಲಕಿಯ ತಾಯಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲಸದಿಂದ ಮನೆಗೆ ಬಂದಾಗ ವಿಷಯ ಗೊತ್ತಾಯಿತು.

ಕೋತನೂರು ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದಳು. ಆಕೆಯ ದೂರಿನ ಮೇರೆಗೆ ಪೊಕ್ಸೊ ಕಾಯ್ದೆಯಡಿ ದೂರು ನೀಡಲಾಗಿದ್ದು ಇಬ್ರಾಹಿಂನನ್ನು ಹುಡುಕಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ತನಿಖೆ ವೇಳೆ, ಕೆಲ ತಿಂಗಳಿನಿಂದ ಇಬ್ರಾಹಿಂ ಮಗಳ ಮೇಲೆ ಕಿರುಕುಳ ನೀಡುತ್ತಿದ್ದು ಪತ್ನಿ ಮೇಲೆ ಕೂಡ ಕೆಲ ಕಾರಣಗಳಿಗೆ ಜಗಳ ಮಾಡುತ್ತಿದ್ದನು. ಆದರೆ ಇವರು ಇದುವರೆಗೆ ಕೇಸು ದಾಖಲಿಸಿಲ್ಲ.

ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com