ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಕಲ್ಪಿಸುವ ಜ್ಞಾನಾಲಯ ಉದ್ಘಾಟನೆ

ಮೈಸೂರು ಮೂಲದ ಸ್ವಯಂ ಸೇವಾ ಸಂಸ್ಥೆಯಾದ ಕಲಿಸು ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಲ್ಲಿ 100 ಜ್ಞಾನಾಲಯಗಳನ್ನು ಆರಂಭಿಸುವ ಯೋಜನೆಯನ್ನು ಪ್ರಕಟಿಸಿದೆ.
ಯದುವೀರ್‍ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾಕುಮಾರಿ ಸಿಂಗ್ ಅವರು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಯದುವೀರ್‍ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾಕುಮಾರಿ ಸಿಂಗ್ ಅವರು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದರು.
Updated on: 

ಬೆಂಗಳೂರು: ಮೈಸೂರು ಮೂಲದ ಸ್ವಯಂ ಸೇವಾ ಸಂಸ್ಥೆಯಾದ ಕಲಿಸು ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಲ್ಲಿ 100 ಜ್ಞಾನಾಲಯಗಳನ್ನು ಆರಂಭಿಸುವ ಯೋಜನೆಯನ್ನು ಪ್ರಕಟಿಸಿದೆ.

ಕಲಿಸು ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದು, ಇಲ್ಲಿ ತನ್ನ ಮೊದಲ ಜ್ಞಾನಾಲಯವನ್ನು ಬೆಂಗಳೂರಿನ ಬನಶಂಕರಿ ಮೊದಲ ಹಂತದ ಬ್ಯಾಟರಾಯನಪುರದ ಸರ್ಕಾರಿ ಹೈಯರ್ ಪ್ರೈಮರಿ ಶಾಲೆಯಲ್ಲಿ ಬುಧವಾರ ಆರಂಭಿಸಿತು.

ಶಾಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಜ್ಞಾನಾಲಯವನ್ನು ಯದುವೀರ್‍ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾಕುಮಾರಿ ಸಿಂಗ್ ಅವರು ಉದ್ಘಾಟನೆ ಮಾಡಿದರು. ಇದು ಕಲಿಸು ಸಂಸ್ಥೆಯಿಂದ ನಿರ್ಮಾಣವಾಗಿರುವ 19ನೇ ಜ್ಞಾನಾಲಯವಾಗಿದೆ.

ಈ ಕಲಿಸು ಫೌಂಡೇಶನ್‍ಗೆ ಯದುವೀರ್‍ ಕೃಷ್ಣದತ್ತ ಚಾಮರಾಜ ಒಡೆಯರ್‍ ಅವರು ರಾಯಭಾರಿಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸುಧಾರಣೆಗೆ ಫೌಂಡೇಶನ್‍ನೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಇದೇ ವೇಳೆ, ಒಡೆಯರ್‍ ಅವರು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಗ್ರಂಥಾಲಯಗಳ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನಂತರ ಮಕ್ಕಳು ಈ ಮಹಾರಾಜ ದಂಪತಿಗೆ ಕೆಲವೊಂದು ಕುತೂಹಲಕಾರಿಯಾದ ಪ್ರಶ್ನೆಗಳನ್ನು ಕೇಳಿದರು.

ಈ ಜ್ಞಾನಾಲಯವನ್ನು ಉದ್ಘಾಟಿಸಿ ಮಾತನಾಡಿದ ಯದುವೀರ್‍ ಕೃಷ್ಣದತ್ತ ಚಾಮರಾಜ ಒಡೆಯರ್‍ ಅವರು, "ಬೆಂಗಳೂರಿನಲ್ಲಿ ಜ್ಞಾನಾಲಯವನ್ನು ಉದ್ಘಾಟನೆ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಇಂತಹ ಸೌಲಭ್ಯದಿಂದ ಹಲವಾರು ಶಾಲೆಗಳು ಪ್ರಯೋಜನ ಪಡೆಯಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಇದೇ ವೇಳೆ ಇಂತಹ ಕಾರ್ಯಕ್ಕೆಕಾರ್ಪೊರೇಟ್ ಸಂಸ್ಥೆಗಳು ನೆರವಾಗಿ ಇನ್ನೂ ಹೆಚ್ಚು ಶಾಲೆಗಳಿಗೆ ಈ ಸೌಲಭ್ಯವನ್ನು ಕಲ್ಪಿಸಲು ಸಹಕರಿಸುತ್ತವೆ ಎಂಬ ವಿಶ್ವಾಸವೂ ನನಗಿದೆ’’ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲಿಸು ಫೌಂಡೇಶನ್‍ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ನಿಖಿಲೇಶ್‍, ಕಲಿಸು ಫೌಂಡೇಶನ್‍ನ ಸಹ-ಸಂಸ್ಥಾಪಕರಾದ ವಿಘ್ನೇಶ್ ಎಂ.ಎಂ, ಬಿಇಒ ಅಶ್ವತ್ಥನಾರಾಯಣ ಸಹ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com