ಇದೇ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್‌ಪಂತ್ ಅವರು, ಮಹಾನಗರಗಳಲ್ಲಿ ಕಮೀಷನರ್ ಗಳು, ವಲಯವಾರು ಐಜಿಪಿಗಳು, ಜಿಲ್ಲಾ ಕೇಂದ್ರಗಳಲ್ಲಿ ಎಸ್‌ಪಿಗಳು ಭದ್ರತೆಯ ನಿಗಾವಹಿಸಿದ್ದಾರೆ. ಚುನಾವಣೆಯ ಭದ್ರತೆಗಾಗಿ ಕೇಂದ್ರದಿಂದ ಬಂದಿರುವ ಅರೆ ಸೇನಾಪಡೆಯ 40 ಕಂಪನಿಗಳು ಸೇರಿ ಕೇಂದ್ರ ಮೀಸಲು ಪಡೆಯ 585 ಕಂಪನಿಗಳನ್ನು ಮತ ಎಣಿಕೆ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ರಾಜ್ಯ ಮೀಸಲು ಪಡೆ, ಸಿಎಆರ್, ಡಿಎಆರ್ 754 ತುಕಡಿಗಳು 278 ಡಿವೈಎಸ್ ಪಿಗಳು, 947 ಮಂದಿ ಪೊಲೀಸ್ ಇನ್ಸ್ ಪೆಕ್ಟರ್‌ಗಳು, 5,322 ಎಎಸ್‌ಐಗಳು, 45,685 ಮುಖ್ಯಪೇದೆ-ಪೇದೆಗಳು, 26,672 ಗೃಹರಕ್ಷಕ ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದಾರೆ ಎಂದು ಮಾಹಿತಿ ನೀಡಿದರು.