ಬೆಂಗಳೂರು: ಕಾವೇರಿ ನೀರು ಕೇಳಿದ್ದ ನಟ ರಜನಿಕಾಂತ್ ಗೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಕ್ಕ ಉತ್ತರ ನೀಡಿದ್ದಾರೆ.
"ಕರ್ನಾಟಕದಲ್ಲಿ ನೀರಿದ್ದರೆ ನಾವು ಅವರಿಗೆ ನೀರು ಕೊಡಲು ಸಾಧ್ಯ, ನಮ್ಮ ಅಣೆಕಟ್ಟುಗಳಲ್ಲಿ ಪರಿಸ್ಥಿತಿ ನೋಡಿ, ನಮ್ಮ ರೈತರ ಸ್ಥಿತಿಯನ್ನು ನೋಡಿ, ಆ ನಂತರವೂ ನೀವು (ರಜನಿಕಾಂತ್) ನೀರು ಬಯಸಿದ್ದರೆ ನಾವು ಚರ್ಚಿಸೋಣ" ಕುಮಾರಸ್ವಾಮಿ ಹೇಳಿದ್ದಾರೆ.
ಇದಕ್ಕೂ ಮುನ್ನ ಚೆನ್ನೈನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಖ್ಯಾತ ನಟ ರಜನಿಕಾಂತ್ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಮನವಿ ಮಾಡಿದ್ದರು
"ಕರ್ನಾಟಕದಲ್ಲಿ ಯಾವ ಸರ್ಕಾರವೇ ಬಂದರೂ ಕಾವೇರಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಜಾರಿಗೊಳಿಸಬೇಕು" ಅವರು ಹೇಳೀದ್ದರು.