ನಿಮಗೆ ತಾಕತ್ತಿದ್ರೆ 24 ಗಂಟೆಯಲ್ಲಿ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ, 2ನೇ ಗಂಡನಿಗೆ ಪತ್ನಿ ಸವಾಲ್!

ನಿರಂತರವಾಗಿ ಕಿರುಕುಳ ಹಾಗೂ ತನ್ನ ಚಾರಿತ್ರ್ಯವಧೆ ಮಾಡಿದ್ದ ಪತಿಯ ವಿರುದ್ಧ ತಿರುಗಿಬಿದ್ದಿರುವ ಪತ್ನಿ ನಿಮಗೆ ತಾಕತ್ತಿದ್ರೆ 24 ಗಂಟೆಯೊಳಗೆ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಿತ್ರದುರ್ಗ: ನಿರಂತರವಾಗಿ ಕಿರುಕುಳ ಹಾಗೂ ತನ್ನ ಚಾರಿತ್ರ್ಯವಧೆ ಮಾಡಿದ್ದ ಪತಿಯ ವಿರುದ್ಧ ತಿರುಗಿಬಿದ್ದಿರುವ ಪತ್ನಿ ನಿಮಗೆ ತಾಕತ್ತಿದ್ರೆ 24 ಗಂಟೆಯೊಳಗೆ ನನ್ನ ಸೆಕ್ಸ್ ವಿಡಿಯೋ ಬಹಿರಂಗ ಮಾಡಿ ಎಂದು ಸವಾಲು ಹಾಕಿದ್ದಾರೆ. 
ಚಿತ್ರದುರ್ಗದ ಗೃಹಿಣಿಯೊಬ್ಬರು ಗಂಡನ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೆ ತನ್ನ ಗಂಡ ವಕೀಲ ರಾಘವೇಂದ್ರ ಕಳೆದ ಆರು ತಿಂಗಳಿನಿಂದ ನಿರಂತರ ಕಿರಕುಳ ನೀಡುತ್ತಿದ್ದಾರೆ. ಮಧ್ಯರಾತ್ರಿ ಮುದ್ದೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ನನ್ನ ಹೆಸರಿನಲ್ಲಿದ್ದ ಸುಮಾರು 6 ಕೋಟಿ ಬೆಲೆಯ ಆಸ್ತಿಯನ್ನು ತಾಯಿಯ ಹೆಸರಿಗೆ ಬರೆದುಕೊಟ್ಟಿದ್ದಕ್ಕೆ ಕಿರುಕುಳ ನೀಡುತ್ತಿದ್ದಾನೆ ಎಂದು ಗೃಹಿಣಿ ಆರೋಪಿಸಿದ್ದಾರೆ. 
ನನ್ನ ಪತಿ ರಾಘವೇಂದ್ರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ನನ್ನ ಸೋದರ ಮಾವನ ಜತೆ ನನಗೆ ಅನೈತಿಕ ಸಂಬಂಧ ಇದೆ ಎಂದು ಅಪಪ್ರಚಾರ ಮಾಡಿದ್ದಾನೆ. ನನ್ನ ಬಳಿ ಪತ್ನಿಯ ರಾಸಲೀಲೆ ವಿಡಿಯೋ ಇದೆ. ಅದನ್ನು ಬಿಡುಗಡೆ ಮಾಡುವುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡು ಚಾರಿತ್ರ್ಯಹರಣ ಮಾಡಿದ್ದಾನೆ ಎಂದು ಗೃಹಿಣಿ ಪೊಲೀಸರಿಗೆ ದೂರು ನೀಡಿದ್ದಾರೆ. 
ನನ್ನ ಅನೈತಿಕ ಸಂಬಂಧ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ತಾಕತ್ತಿದ್ರೆ ಇನ್ನು 24 ಗಂಟೆಯೊಳಗೆ ವಿಡಿಯೋವನ್ನು ಬಿಡುಗಡೆ ಮಾಡಲಿ ಎಂದು ಗೃಹಣಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ಸದ್ಯ ರಾಘವೇಂದ್ರ ತಲೆಮರೆಸಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com