ಹಾಸನ: ಬಾಳ ಸಂಗಾತಿಗಾಗಿ 3 ಗಂಟೆ ಕಾಲ ಕಾದು ಕುಳಿತ ನವ ವರ!

ಬಾಳ ಸಂಗಾತಿ ಜೊತೆ ಸಪ್ತಪದಿ ತುಳಿದ ನಂತರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಸಾಮಾನ್ಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಾಸನ: ಬಾಳ ಸಂಗಾತಿ ಜೊತೆ ಸಪ್ತಪದಿ ತುಳಿದ ನಂತರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಸಾಮಾನ್ಯ. ಆದರೆ ನವವಿವಾಹಿತೆ ಕಲ್ಯಾಣ ಮಂಟಪದಿಂದ ಸೀದಾ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದು ಆಕೆಗಾಗಿ ನವ ವರ ಸುಮಾರು 3 ಗಂಟೆಗಳ ಕಾಲ ಕಾದು ಕುಳಿತಿದ್ದರು. 
ಹಾಸನ ಮೂಲದ ಸ್ವಾತಿ ಎಂಬುವರು ಮಾಂಗಲ್ಯಧಾರಣೆ ನಂತರ ಅಲಂಕಾರ ಸಮೇತ ಹಾಸನದ ಮಹಿಳಾ ಪದವಿ ಕಾಲೇಜು ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಗಂಡ ಹಾಗೂ ಕುಟುಂಬಸ್ಥರು ಕಾಲೇಜು ಹೊರಗಡೆ ಕಾಯುತ್ತಿದ್ದರು. 
ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ನವೀನ್ ಶ್ವೇತಾ ಎಂಬವರನ್ನು ಇಂದು ಬೆಳಗ್ಗೆ ವಿವಾಹವಾಗಿದ್ದರು. ಮದುವೆ ದಿನವೇ ಪರೀಕ್ಷೆ ಇದ್ದಿದ್ದರಿಂದ ಪತ್ನಿಯು ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com