#MeToo ಸುಳಿಯಲ್ಲಿ ಸದಾನಂದಗೌಡ? ಇದಕ್ಕೆ ಕೇಂದ್ರ ಸಚಿವರ ಪ್ರತಿಕ್ರಿಯೆ!

ದೇಶಾದ್ಯಂತ ಬಿರುಗಾಳಿಯಂತೆ ಆವರಿಸುತ್ತಿರುವ "ಮೀಟೂ" ಆಂದೋಲನ ದಿನೇ ದಿನೇ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ.....
ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ
ಬೆಂಗಳೂರು: ದೇಶಾದ್ಯಂತ ಬಿರುಗಾಳಿಯಂತೆ ಆವರಿಸುತ್ತಿರುವ "ಮೀಟೂ" ಆಂದೋಲನ ದಿನೇ ದಿನೇ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿರುದ್ಧ ಸಹ "ಮೀಟೂ" ಆರೋಪ ಕೇಳಿ ಬಂದಿದೆ.
ಸದಾನಂದಗೌಡ ಮುಖ್ಯಮಂತ್ರಿಗಳಾಗಿದ್ದ ವೇಳೆ ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದರೆಂದು ಮಹಿಳಾ ಮೋರ್ಚಾದಲ್ಲಿದ್ದ ಮಾಧುರಿ ಮುಧೋಳ್: ಆರೋಪಿಸಿದ್ದಾರೆ.
"ನನಗೆ ಪದೇ ಪದೇ ಕರೆ ಮಾಡಿ ಕಛೇರಿಗೆ ಬನ್ನಿ, ಊಟಕ್ಕೆ ಬನ್ನಿ ಎಂದೆಲ್ಲಾ ಕರೆಯುತ್ತಿದ್ದಲ್ಲದೆ ಮೈ ಮೇಲೆ ಬೀಳೋದು, ಮೈ ಕೈ ಮುಟ್ಟೋದು ಹೀಗೆಲ್ಲಾ ಮಾಡುತ್ತಿದ್ದರು" ಅವರು ಆರೋಪಿಸಿದ್ದಾರೆ.
ಸದಾನಂದಗೌಡ ಪ್ರತಿಕ್ರಿಯೆ
ಮಾಧುರಿ ಅವರ ಆರೋಪಕ್ಕೆ ಪ್ರತಿಕ್ರಯಿಸಿರುವ ಮಾಜಿ ಮುಖ್ಯಮಂತ್ರಿ ಸದಾನಂದಗೌಡ "ಆಕೆ ಮಹಿಳಾ ಮೋರ್ಚಾದಲ್ಲಿದ್ದದ್ದು ನನಗೆ ನೆನಪಿದೆ ನಿಜ ಆದರೆ ನಾನಾಗ ಮುಖ್ಯಮಂತ್ರಿಯಾಗಿರಲಿಲ್ಲ, ಅಧ್ಯಕ್ಷನಾಗಿದ್ದೆ, ನಾನು ಹೇಗಿದ್ದೇನೆ ಎನ್ನುವುದು ಜಗತ್ತಿಗೆ ಗೊತ್ತು. ನಾನು ಯಾರಿಗೆ ಏನೂ ಹೆಳಲು ಹೋಗಲ್ಲ" ಎಂದಿದ್ದಾರೆ.
ಇತ್ತ ಮಾಧುರಿ ಮಾದ್ಯಮಗಳಲ್ಲಿ ತಮ್ಮ ಪೋಸ್ಟ್ ಕುರಿತು ಸುದ್ದಿ ಬಿತ್ತರವಾಗುತ್ತಿದ್ದಂತೆ ತಾವು ಪ್ರಕಟಿಸಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com