ಬೆಂಗಳೂರು ಇಪಿಎಫ್ಒ ನಿಂದ 'ಜಾಗೃತ ಜಾಗೃತಿ ವಾರ' ಆಯೋಜನೆ

ನೌಕರರ ಭವಿಷ್ಯ ನಿಧಿ ಸಂಸ್ಥೆ, ಬೆಂಗಳೂರು, ಇವರು 29.10.2018 ರಿಂದ 03.11.208ರ ವರಗೆ 'ಜಾಗೃತ ಜಾಗೃತಿ ವಾರ'ವನ್ನು ಆಯೋಜಿಸಿದ್ದಾರೆ.
ಬೆಂಗಳೂರು ಇಪಿಎಫ್ಒ ನಿಂದ 'ಜಾಗೃತ ಜಾಗೃತಿ ವಾರ' ಆಯೋಜನೆ
Updated on: 

ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ, ಬೆಂಗಳೂರು, ಇವರು 29.10.2018 ರಿಂದ 03.11.208ರ ವರಗೆ 'ಜಾಗೃತ ಜಾಗೃತಿ ವಾರ'ವನ್ನು ಆಯೋಜಿಸಿದ್ದಾರೆ. ಈ ವರ್ಷದ ವಿಷಯ 'ಭ್ರಷ್ಟಾಚಾರ ತೊಲಗಿಸಿ - ನವ ಭಾರತ ನಿರ್ಮಿಸಿ'.

ಭವಿಷ್ಯ ನಿಧಿ ಸಂಸ್ಥೆಯು ತನ್ನ ಕೆಲಸ ಕಾರ್ಯಗಳಲ್ಲಿ ನ್ಯಾಯಪರತೆ, ಪ್ರಾಮಾಣೀಕತೆ ಮತ್ತು ಸಮಗ್ರತೆಗಳನ್ನು ಒಗ್ಗೂಡಿಸಿಕೊಂಡು ಸಂಬಂಧಪಟ್ಟ ಎಲ್ಲರ ವಿಶ್ವಾಸ ಗಳಿಸುವ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಈ ಬದ್ಧತೆಯನ್ನು ಖಚಿತಪಡಿಸುವ ಸಲುವಾಗಿ, ಇಪಿಎಫ್ಒ ತನ್ನ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಜಾಗೃತ ದಳವನ್ನು ಪ್ರಾರಂಭಿಸಿದೆ.

ಸಾರ್ವಜನಿಕರು ಇಪಿಎಫ್ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಮತ್ತು ಕಚೇರಿಯ ಕಾರ್ಯವೈಖರಿಗೆ ಸಂಬಂಧಪಟ್ಟ ಎಲ್ಲಾ ರೀತಿಯ ದೂರುಗಳನ್ನು ಇಲ್ಲಿ ದಾಖಲಿಸಬಹುದು. ಸಾರ್ವಜನಿಕರು ಶ್ರೀ. ಮನೀಶ್ ಅಗ್ನಿಹೋತ್ರಿ, ಆರ್ ಪಿ ಎಫ್ ಸಿ-1, ಭವಿಷ್ಯ ನಿಧಿ ಭವನ, ನಂ.13, ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಬೆಂಗಳೂರು - 560 025, ಇವರ ಹೆಸರಿಗೆ ನೇರವಾಗಿ ತಮ್ಮ ದೂರುಗಳನ್ನು ಕೊಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com