ಬಿಬಿಎಂಪಿ ಮೇಯರ್ ಚುನಾವಣೆ: ಗದ್ದುಗೆ ಹಿಡಿಯಲು ಪ್ರತಿಪಕ್ಷಗಳ ಕಸರತ್ತು
ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಕೇವಲ 3 ದಿನಗಳು ಮಾತ್ರ ಬಾಕಿಯಿದ್ದು, ಬಿಬಿಎಂಪಿ ಮೈತ್ರಿ ಆಡಳಿತದಲ್ಲಿ ಸತತ ನಾಲ್ಕನೇ ವರ್ಷವೂ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ...
ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಕೇವಲ 3 ದಿನಗಳು ಮಾತ್ರ ಬಾಕಿಯಿದ್ದು, ಬಿಬಿಎಂಪಿ ಮೈತ್ರಿ ಆಡಳಿತದಲ್ಲಿ ಸತತ ನಾಲ್ಕನೇ ವರ್ಷವೂ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ ಮಾಡಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಪಕ್ಷೇತರ ಸದಸ್ಯರ ಬೆಂಬಲಕ್ಕಾಗಿ ಭಾರೀ ಕಸರತ್ತುಗಳನ್ನು ನಡೆಸುತ್ತಿದೆ.
ಈ ಬಾರಿಯ ಮೇಯರ್ ಚುನಾವಣೆಗೆ ಒಟ್ಟು 259 ಮತದಾರರಿದ್ದಾರೆ. ಮೇಯರ್ ಹುದ್ದೆ ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತಕ್ಕೆ 130 ಮತಗಳು ಬೇಕು. ಸದ್ಯ 128 ಮತಗಳನ್ನು ಹೊಂದಿರುವ ಮೈತ್ರಿ ಪಕ್ಷಗಳು ಗೆಲುವಿಗೆ ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ ಸಾಕು.
8 ಜನ ಪಕ್ಷೇತರ ಸದಸ್ಯರ ಪೈಕಿ ಐವರ ಬೆಂಬಲ ಖಚಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇನ್ನೂ ಮೂವರು ಯಾರನ್ನು ಬೆಂಬಲಿಸುತ್ತಾರೆಂಬುದರ ಗೊಂದಲದಲ್ಲಿದ್ದಾರೆ. ಹಾಗಾಗಿ ಬಿಜೆಪಿ ಇದರ ಲಾಭ ಪಡೆದು ಕಾಂಗ್ರೆಸ್ ಬೆಂಬಲಸಿಲ್ದದಾರೆನ್ನಲಾದ ಐವರು ಪಕ್ಷತರರಲ್ಲಿ ಕನಿಷ್ಠ ಇಬ್ಬರನ್ನು ತನ್ನ ಬಲೆ ಅಥವಾ ಆಮಿಷಕ್ಕೆ ಒಳಗಾಗಿಸಿದರೆ ಮೇಯರ್ ಚುನಾವಣೆಯೇ ಅತಂತ್ರವಾಗುತ್ತದೆ.
123 ಸಂಖ್ಯಾ ಬಲ ಹೊಂದಿರುವ ಬಿಜೆಪಿ 7 ಪಕ್ಷೇತರರ ಬೆಂಬಲ ಪಡೆದರೆ ಗೆಲ್ಲಬಹುದಾದರೂ, ಈಗಾಗಲೇ ಆ ಪ್ರಯತ್ನನಡೆಸಿ ಪಕ್ಷೇತರರನ್ನು ತನ್ನತ್ತ ಸೆಳೆಯಲು ವಿಫಲವಾಗಿದೆ. ಆದರೂ ಬಿಜೆಪಿ ತಾನು ಗೆಲ್ಲಲು ಸಾಧ್ಯವಿಲ್ಲವೆಂದಾದರೂ ಕಾಂಗ್ರೆಸ್ ಕೂಡ ಈ ಬಾಕಿ ಗೆಲ್ಲದಂತೆ ನೋಡಿಕೊಳ್ಳಲು ಚಾಕಚಕ್ಯತೆ ತೋರಿದರೆ ಆಶ್ಚರ್ಯಪಡಬೇಕಿಲ್ಲ.
ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಪಕ್ಷೇತರ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದರು. ಇದರಂತೆ ಬಿಜೆಪಿ ಹಿರಿಯ ನಾಯಕರೂ ಕೂಡ ಪಕ್ಷೇತರ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದರು. ಮೂಲಗಳ ಪ್ರಕಾರ ಪಕ್ಷೇತರ ಸದಸ್ಯರು ಈ ಹಿಂದಿನಂತೆಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೇ ಬೆಂಬಲ ನೀಡುತ್ತಾರೆಂದು ಹೇಳಲಾಗುತ್ತಿದೆ.
ದೊಮ್ಮಲೂರು ವಾರ್ಡ್ ಪಕ್ಷೇತರ ಸದಸ್ಯ ಸಿ.ಆಱ್ ಲಕ್ಷ್ಮೀನಾರಾಯಣ ಅವರು ಮಾತನಾಡಿ, ಈ ಹಿಂದಿನಿಂದಲೂ ಕಾಂಗ್ರೆ-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಿದ್ದೆವು. ಈ ವರ್ಷ ಕೂಡ ಆ ಬೆಂಬಲವನ್ನು ಮುಂದುವರೆಸುತ್ತೇವೆಂದು ಹೇಳಿದ್ದಾರೆ.
ಬಿಬಿಎಂಪಿ ಆಡಳಿತಾರೂಢ ಪಕ್ಷದ ನಾಯಕ ಎಂ.ಶಿವರಾಜ್ ಅರು ಮಾತನಾಡಿ, 6 ಪಕ್ಷೇತರ ಸದಸ್ಯರು ನಮಗೆ ಬೆಂಬಲ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.
ಆದರೆ, ಭರವಸೆ ಕೈಬಿಡದ ಬಿಜೆಪಿ, ಚುನಾವಣೆ ಗೆಲ್ಲುವ ವಿಶ್ವಾಸ ನಮಗಿದೆ. ಪಕ್ಷದ ಅಭ್ಯರ್ಥಿಗಳಿಗೆ ಪಕ್ಷೇತರರು ಬೆಂಬಲ ನೀಡಿದ್ದೇ ಆದರೆ, ಬಿಜೆಪಿ ಅಧಿಕಾರಕ್ಕ ಬರಲಿದೆ ಎಂದು ಬಿಜೆಪಿ ಹಿರಿಯ ನಾಯಕ ಪದ್ಮನಾಭ ರೆಡ್ಡಿ ಹೇಳಿದ್ದಾರೆ.
ಚಿಕ್ಕಪೇಟೆ ಕ್ಷೇತ್ರದ ಜಯನಗರ ವಾರ್ಡ್'ನ ಗಂಗಾಬಿಕ ಮಲ್ಲಿಕಾರ್ಜುನ ಅವರನ್ನು ನಿಲ್ಲಿಸಲು ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗಂಗಾಂಬಿಕಾ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿಯವರು ಬೆಂಬಲ ನೀಡಿದ್ದಾರೆ. ಮೇಯರ್ ಸ್ಥಾನಕ್ಕೆ ಆಕಾಂಕ್ಷೆಯಿಟ್ಟುಕೊಂಡಿದ್ದೇನೆಂದು ಗಂಗಾಂಬಿಕಾ ಅವರು ಹೇಳಿದ್ದಾರೆ.