1 ವಾರವಾದ್ರೂ ಗಂಡ ಮನೆಗೆ ಬಂದಿಲ್ಲ; ಹುಡುಕಿ ಕೊಡ್ತೀರಾ, ಇಲ್ಲ ಆತ್ಮಹತ್ಯೆ ಮಾಡಿಕೊಳ್ಳ: ಪೊಲೀಸರಿಗೆ ಮಹಿಳೆ ಬೆದರಿಕೆ

ನನ್ನ ಪತಿ ಮನೆಗೆ ಬಾರದೆ 1 ವಾರವಾಯ್ತು, ಹುಡುಕಿ ಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ನನ್ನ ತಾಳ್ಮೆ ನಶಿಸಿದೆ. ನನ್ನ ಗಂಡನನ್ನು ಹುಡುಕಿ...
ಜೈ-ಜಿನಿಷಾ
ಜೈ-ಜಿನಿಷಾ
Updated on: 
ಬೆಂಗಳೂರು: ನನ್ನ ಪತಿ ಮನೆಗೆ ಬಾರದೆ 1 ವಾರವಾಯ್ತು, ಹುಡುಕಿ ಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ನನ್ನ ತಾಳ್ಮೆ ನಶಿಸಿದೆ. ನನ್ನ ಗಂಡನನ್ನು ಹುಡುಕಿ ಕೊಡುತ್ತೀರಾ ಅಥವಾ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. 
ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸಿಯಾಗಿರುವ ಜಿನಿಷಾ ತನ್ನ ಗಂಡ ಜೈಯನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪತಿ ಜೈ ಬಗ್ಗೆ ಎಲ್ಲೂ ಮಾಹಿತಿ ಸಿಗದ ಕಾರಣ ಬೇಸರಗೊಂಡಿರುವ ಜಿನಿಷಾ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.
ಜಿನಿಷಾ ಮತ್ತು ಜೈ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಕಳೆದ ಒಂದು ವಾರದ ಹಿಂದೆ ಜೈ ಮನೆಯಿಂದ ಹೊರಗೆ ಹೋಗಿದ್ದು ಮತ್ತೆ ಹಿಂದಿರುಗಿ ಬಂದಿಲ್ಲ. ಆಗ ಜಿನಿಷಾ ತನ್ನ ಪತಿಯನ್ನು ಹುಡುಕಿಕೊಡುವಂತೆ ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. 
ಜಿನಿಷಾ ಫೇಸ್ ಬುಕ್ ಪೋಸ್ಟ್ ನಲ್ಲಿ ನನ್ನ ಗಂಡನನ್ನು ಹುಡುಕಿ ಕೊಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಂಡರೆ ನನ್ನ ಒಂದು ವರ್ಷದ ಮಗುವಿಗೆ ಪೊಲೀಸರೇ ಜವಾಬ್ದಾರಿ ಎಂದು ಬರೆದು ಬೆಂಗಳೂರು ಪೊಲೀಸರ ಫೇಸ್ ಬುಕ್ ಪೇಜ್ ಗೆ ಟ್ಯಾಗ್ ಮಾಡಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com