ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸಂತ್ರಸ್ತೆಯ ಸಹೋದರನಿಗೆ ಚಾಕು ಇರಿದ ಗ್ಯಾಂಗ್!
ರಾಜ್ಯ
ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಸಂತ್ರಸ್ತೆಯ ಸಹೋದರನಿಗೆ ಚಾಕು ಇರಿದ ಗ್ಯಾಂಗ್!
ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಕಿರಾತಕರ ಗ್ಯಾಂಗ್ ಲೈಂಗಿಕ ಕ್ರಿಯೆ ನಡೆಸುವಂತೆ ಆಕೆಯನ್ನು ಒತ್ತಾಯಿಸಿದ್ದು, ಆಕೆಯ 14 ವರ್ಷದ ಸಹೋದರನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ.
ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಕಿರಾತಕರ ಗ್ಯಾಂಗ್ ಲೈಂಗಿಕ ಕ್ರಿಯೆ ನಡೆಸುವಂತೆ ಆಕೆಯನ್ನು ಒತ್ತಾಯಿಸಿದ್ದು, ಆಕೆಯ 14 ವರ್ಷದ ಸಹೋದರನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆ ವ್ಯಾಕ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದಾಗ ಸಂತ್ರಸ್ತ ಮಹಿಳೆ, ಆಕೆಯ ಒಂದು ವರ್ಷದ ಮಗು ಹಾಗೂ ಸಹೋದರ ಮನೆಯಲ್ಲಿದ್ದರು. ಆಕೆಯ ಪತಿ ಕೆಲಸದ ನಿಮಿತ್ತ ಬೆಂಗಳೂರಿನಿಂದ ಹೊರಗೆ ಹೋಗಿದ್ದರು.
ಸಂತ್ರಸ್ತೆ ನೀಡಿರುವ ದೂರಿನ ಮಾಹಿತಿಯ ಪ್ರಕಾರ ರಾತ್ರಿ 10:30 ರ ವೇಳೆ ಮಗುವಿಗೆ ಆಹಾರ ನೀಡುತ್ತಿದ್ದ ವೇಳೆ ಏಕಾ ಏಕಿ ಮನೆಗೆ ನುಗ್ಗಿದ ಕಿರಾತಕರ ಗ್ಯಾಂಗ್ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ. ಆಕೆ ಕಿರುಚಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಭಯಗೊಂಡು ಗ್ಯಾಂಗ್ ನ ಸದಸ್ಯರು ಪರಾರಿಯಾಗಿದ್ದಾರೆ. ಈ ವೇಳೆ ಹೊರಗೆ ನಿಂತಿದ್ದ ಸಹೋದರನಿಗೆ ಚಾಕುವಿನಿಂದ ಇರಿದಿದ್ದಾರೆ.
ಗ್ಯಾಂಗ್ ನ ಸದಸ್ಯರ ಪೈಕಿ ಓರ್ವನನ್ನು ಸಂತ್ರಸ್ತೆ ಕಿರಣ್ ಎಂದು ಗುರುತಿಸಿದ್ದು, ಸಂತ್ರಸ್ತೆಯ ಸಹೋದರನಿಗೆ ಈ ಗ್ಯಾಂಗ್ ನ ಸದಸ್ಯರು ಪರಿಚಯವಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಇದೇ ಗ್ಯಾಂಗ್ ನ ಸದಸ್ಯರ ನಡುವೆ ಘರ್ಷಣೆ ಉಂಟಾದಾಗ ಅದನ್ನು ಬಿಡಿಸಲು ಬಂದಿದ್ದ ಪೊಲೀಸರು ಸಂತ್ರಸ್ತೆಯ ಸಹೋದರನನ್ನು ಬಂಧಿಸಿದ್ದರು. ಪೊಲೀಸ್ ಪ್ರಕರಣ ಆದ ನಂತರವೂ ಸಹ ಗ್ಯಾಂಗ್ ನ ಸದಸ್ಯ ಕಿರಣ್ ಸಂತ್ರಸ್ತೆಗೆ ಕರೆ ಮಾಡಿ ದೂರು ವಾಪಸ್ ಪಡೆಯದೇ ಇದ್ದರೆ ಆಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ