ಕೊಪ್ಪಳ: ವಿದ್ಯುತ್‌ ತಂತಿ ತಗುಲಿ ಮೂವರ ದಾರುಣ ಸಾವು

ಟ್ರ್ಯಾಕ್ಟರ್​ ಮೇಲೆ ವಿದ್ಯುತ್​ತಂತಿ ಬಿದ್ದ ಪರಿಣಾಮ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಪ್ಪಳ: ಟ್ರ್ಯಾಕ್ಟರ್​ ಮೇಲೆ ವಿದ್ಯುತ್​ತಂತಿ ಬಿದ್ದ ಪರಿಣಾಮ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಪೊಲೀಸ್‌ ಮೂಲಗಳ ಪ್ರಕಾರ, ಹನುಮಪ್ಪ ಬೀರಪ್ಪನವರ (30), ಮಕ್ಕಳಾದ ಪ್ರಿಯಾಂಕಾ (4) ಮತ್ತು ಬೀರಪ್ಪ (2) ಮೃತಪಟ್ಟವರು ಎಂದು ಹೇಳಲಾಗಿದೆ. ಶುಕ್ರವಾರ ಬೆಳಗ್ಗೆ ಹೊಲದಲ್ಲಿ ರಾಶಿ ಮಾಡಲು ಇವರು ಟ್ರ್ಯಾಕ್ಟರ್​ನಲ್ಲಿ ತೆರಳುತ್ತಿದ್ದರು. 

ಈ ವೇಳೆ ವಿದ್ಯುತ್​ ತಂತಿ ತುಂಡಾಗಿ ಟ್ರ್ಯಾಕ್ಟರ್​ ಮೇಲೆ ಬಿದ್ದಿದ್ದು, ಇದರ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ಈ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com