ರಾಜ್ಯ

ರ್ಯಾಪಿಡ್ ಟೆಸ್ಟ್ ಕಿಟ್'ಗಳು ಕರ್ನಾಟಕದ ಕೈಸೇರಲು ಮತ್ತಷ್ಟು ವಿಳಂಬ ಸಾಧ್ಯತೆ

ರ್ಯಾಪಿಡ್ ಟೆಸ್ಟ್ ಕಿಟ್'ಗಳು ಕರ್ನಾಟಕದ ಕೈಸೇರಲು ಮತ್ತಷ್ಟು ವಿಳಂಬ ಸಾಧ್ಯತೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಬಹುನಿರೀಕ್ಷಿತ ಕೋವಿಡ್-19 ಪರೀಕ್ಷಾ ಕಿಟ್'ಗಳ ಮೊದಲ ಸರಕು ಗುರುವಾರ ಬೆಳಿಗ್ಗೆ ಚೀನಾದ ಗುವಾಂಗ್ಝೌ ವಿಮಾನ ನಿಲ್ದಾಣದಿಂದ ಭಾರಕ್ಕೆ ಹೊರಟಿದೆ. ಆದರೆ, ಈ ಟೆಸ್ಟ್ ಕಿಟ್ ಗಳಿಗಾಗಿ ರಾಜ್ಯ ಮತ್ತೆರಡು ವಾರಗಳು ಕಾಲ ಕಾಯಬೇಕಿದೆ. 

ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳ ಜೊತೆಗೆ ಕರ್ನಾಟಕ ಕೂಡ ಒಂದು ಪಕ್ಷ ಸ್ಟ್ರಿಪ್ ಕ್ಷಿಪ್ರ ಪರೀಕ್ಷಾ ಕಿಟ್ ಗಳನ್ನು ಪಡೆಯುವ ನಿರೀಕ್ಷೆಗಳು ಹೆಚ್ಚಿವೆ. 

ಕೇಂದ್ರ ಸರ್ಕಾರಕ್ಕೂ ಮುನ್ನವೇ ಟೆಸ್ಟ್ ಕಿಟ್ ಗಳಿಗಾಗಿ ಕರ್ನಾಟಕ ಆರ್ಡರ್ ನೀಡಿತ್ತು. ಅದಾಗ್ಯೂ ಚೀನಾ ಮೊದಲು ಭಾರತ ಸರ್ಕಾರದ ಆದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಲಾಗುತ್ತಿದೆ. 

ರ್ಯಾಪಿಡ್ ಆ್ಯಂಡಿಬಾಡಿ ಮತ್ತು ಆರ್ಎನ್ಎ ಎಕ್ಸ್ಟ್ರಾಕ್ಷನ್ ಕಿಟ್ ಗಳು ಸೇರಿದಂತೆ ಒಟ್ಟು 6,50,000 ಕಿಟ್ ಗಳಿಗೆ ಭಾರತ ಆರ್ಡರ್ ಮಾಡಿದ್ದು, ಈ ಕಿಟ್ ಗಳನ್ನು ಈಗಾಗಲೇ ಭಾರತಕ್ಕೆ ರವಾನಿಸಿದೆ ಎಂದು ವರದಿಗಳು ತಿಳಿಸಿವೆ

ಹೆಚ್ಚು ಅಪಾಯವಿರುವ ಪ್ರದೇಶಗಳಲ್ಲಿ ಟೆಸ್ಟ್ ಕಿಟ್ ಗಳ ಬಳಕೆ
ಹೆಚ್ಚು ಸೋಂಕಿತ ಪ್ರದೇಶಗಳು ಹಾಗೂ ಹೆಚ್ಚು ಅಪಾಯ ಇರುವ ಪ್ರದೇಶಗಳಲ್ಲಿ ಈ ಕಿಟ್ ಗಳನ್ನು ಬಳಕೆ ಮಾಡುವಂತೆ ಭಾರತ ಸರ್ಕಾರ ಆದೇಶಿಸಿದೆ. ಕರ್ನಾಟಕ ಸರ್ಕಾರ ಕಾಯ್ದಿರಿಸಿದ್ದ ವೈದ್ಯಕೀಯ ಸಲಕರಣೆಗಳು ಇನ್ನೆರಡು ವಾರಗಳ ಬಳಿಕ ಸರ್ಕಾರದ ಕೈ ಸೇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗುರುವಾರ ಟೆಸ್ಟ್ ಕಿಟ್ ಗಳು ಕರ್ನಾಟಕ್ಕೆ ಬರುವ ಸಾಧ್ಯತೆಗಳಿವೆ. ಆದರೆ, ಚೀನಾ ಟೆಸ್ಟ್ ಕಿಟ್ ಗಳು ಪರೀಕ್ಷೆ ನಡೆಸಲು ಸುಲಭವಾಗಿದೆ. ರ್ಯಾಪಿಡ್ ಟೆಸ್ಟ್ ಕಿಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ. 

ಮೊದಲ ಹಂತದಲ್ಲಿ ಕರ್ನಾಟಕ್ಕೆ 5,000 ಕಿಟ್ ಗಳನ್ನು ನೀಡಲಾಗುತ್ತದೆ. ಬಳಿಕ ಅಗತ್ಯಕ್ಕೆ ತಕ್ಕಂತೆ ಕಿಟ್ ಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.