ಮೈಸೂರು: ಮಾಸ್ಕ್‌ ಹಾಕಿಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಗೆ ಧಮ್ಕಿ

ಮುಖಕ್ಕೆ ಮಾಸ್ಕ್‌ ಹಾಕಿಕೊಳ್ಳಿ ಎಂದು ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತೆಗೆ ಕೆಲ ದುಷ್ಕರ್ಮಿಗಳು ಧಮಕಿ ಹಾಕಿದ ಘಟನೆ ಮೈಸೂರಿನ ಆಲೀಂ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮೈಸೂರು: ಮುಖಕ್ಕೆ ಮಾಸ್ಕ್‌ ಹಾಕಿಕೊಳ್ಳಿ ಎಂದು ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತೆಗೆ ಕೆಲ ದುಷ್ಕರ್ಮಿಗಳು ಧಮಕಿ ಹಾಕಿದ ಘಟನೆ ಮೈಸೂರಿನ ಆಲೀಂ ನಗರದಲ್ಲಿ ನಡೆದಿದೆ.

ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಸ್‌ಗೆ ಪುಂಡರು ಬೆದರಿಕೆ ಹಾಕಿದ್ದಾರೆ. ಸುಮಾಯಾ ಅವರು ಕೊರೊನಾ ಲಕ್ಷಣಗಳ ಕುರಿತಾಗಿ ಸರ್ವೆ ಮಾಡುವ ವೇಳೆ, ಮೂವರು ಪುಂಡರಿಂದ ಈ ದೌರ್ಜನ್ಯ ನಡೆದಿದೆ. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದಿಕೊಳ್ಳಿ ಎಂದಿದ್ದಕ್ಕೆ ಏಕಾಏಕಿ ಗಲಾಟೆ ಮಾಡಿದ ಪುಂಡರು ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.

ಗಲಾಟೆ ಮಾಡಿದವರನ್ನು ಮೆಹಬೂಬ್, ಖಲೀಲಾ, ಜೀಸನ್ ಎಂದು ಗುರುತಿಸಲಾಗಿದೆ. ಬೆದರಿಕೆಯಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದಲೂ ಇವರು ನಿಂದಿಸಿದ್ದಾರೆ. ಈ ಕುರಿತಾಗಿ ಆಶಾ ಕಾರ್ಯಕರ್ತೆ ಸುಮಯಾ ಎನ್ ಆರ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದ ತಕ್ಷಣವೇ ಮೂವರನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಆಶಾ ಕಾರ್ಯಕರ್ತೆ ಮೇಲೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಮ್ಕಿ ಹಾಕಿದ ಆರೋಪಿಗಳ ವಿರುದ್ದ ಎಫ್ ಐ ಆರ್ ಹಾಕಲಾಗಿದೆ. ಶೀಘ್ರದಲ್ಲೇ ಅವರನ್ನ ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com