ರಾಜ್ಯ

ಸೋಂಕು ಪತ್ತೆ ಹಚ್ಚಲು ವಾಸನೆ ಗ್ರಹಿಕೆ ಪರೀಕ್ಷೆ: ಆರೋಗ್ಯ ಇಲಾಖೆ ಅನುಮತಿಗಾಗಿ ಕಾಯುತ್ತಿರುವ ಬಿಬಿಎಂಪಿ

ಸೋಂಕು ಪತ್ತೆ ಹಚ್ಚಲು ವಾಸನೆ ಗ್ರಹಿಕೆ ಪರೀಕ್ಷೆ: ಆರೋಗ್ಯ ಇಲಾಖೆ ಅನುಮತಿಗಾಗಿ ಕಾಯುತ್ತಿರುವ ಬಿಬಿಎಂಪಿ
ಬಿಬಿಎಂಪಿ ಮೇಯರ್
Published On :

ಬೆಂಗಳೂರು: ಸೋಂಕು ಪತ್ತೆ ಹಚ್ಚಲು ವಾಸನೆ ಗ್ರಹಿಕೆ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದ್ದು, ಆರೋಗ್ಯ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ. 

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿರುವ ಮೇಯರ್ ಗೌತಮ್ ಕುಮಾರ್ ಅವರು, ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ವಾಸನೆ ಗ್ರಹಿಕೆ ಪರೀಕ್ಷೆ ನಡೆಸಲು ಚಿಂತನೆಗಳು ನಡೆದಿದ್ದು, ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿಯಲಾಗಿದೆ ಎಂದು ಹೇಳಿದ್ದಾರೆ. 

ಆದರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂತಹ ಯಾವುದೇ ಪತ್ರಗಳೂ ಬಿಬಿಎಂಪಿಯಿಂದ ಬಂದಿಲ್ಲ ಎಂದು ಹೇಳುತ್ತಿದ್ದಾರೆ. 

ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಮಾತನಾಡಿ. ಈ ಕುರಿತ ಪ್ರಸ್ತಾವನೆಯನ್ನು ತಜ್ಞರ ಸಮಿತಿಯ ಮುಂದೆ ಮತ್ತು ಐಸಿಎಂಆರ್ ಅನುಮೋದನೆಗಾಗಿ ನೀಡಲಾಗುತ್ತದೆ. ಆಲೋಚನೆ ಉತ್ತಮವಾಗಿದೆ, ಆದರೆ ಅದನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಹೇಳಿದ್ದಾರೆ. 

ಬಿಬಿಎಂಪಿ ಆಯುಕ್ತರ ಈ ನಿರ್ಧಾರ ಕುರಿತು ಇಬ್ಬರು ಬಿಬಿಎಂಪಿ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಖರ್ಚು ವೆಚ್ಚಗಳ ಕುರಿತು ಆಶ್ಚರ್ಯವ್ಯಕ್ತಪಡಿಸಿದ್ದು, ಇಂತಹ ಪರೀಕ್ಷೆಗೆ ವೈದ್ಯರೂ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೋನಾ ಇದ್ದವರಿಗಷ್ಟೇ ರುಚಿ ಹಾಗೂ ಗ್ರಹಿಕೆಯ ಶಕ್ತಿಯಿರುವುದಿಲ್ಲ ಎಂದು ಹೇಳರುವುದು ಕಷ್ಟ ಎಂದಿದ್ದಾರೆ. 

ಈ ನಡುವೆ ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡಿರುವ ಮೇಯರ್, ವಾಸನೆ ಹಾಗೂ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದು ಕೊರೋನಾ ಲಕ್ಷಣಗಳಾಗಿವೆ. ಎಲ್ಲಾ ಜ್ವರ ಇದ್ದವರೂ ವಾಸನೆ ಹಾಗೂ ಗ್ರಹಿಕೆಯ ಶಕ್ತಿ ಕಳೆದುಕೊಂಡಿರುವುದಿಲ್ಲ. ಇದಷ್ಟೇ ಅಲ್ಲದೆ, ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗೂತ್ತದೆ ಎಂದು ತಿಳಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.