

ಹೊಸಪೇಟೆ: ಈ ಮಹಾಮಾರಿ ಕೊರೊನ ವಕ್ಕರಿಸಿದಾಗಿನಿಂದ ಸಂಭಂದಿಗಳೇ ಶವ ಸಂಸ್ಕಾರ ಮಾಡಲು ಬರುವುದಕ್ಕೆ ಹಿಂಜರಿಯುತಿದ್ದಾರೆ, ಆದರೆ ಇಲ್ಲೊಂದು ತಂಡ ಇದೆ, ಶವ ಸಂಸ್ಕಾರದ ಸುದ್ದಿ ತಿಳಿದರೆ ಸಾಕು ಆ ಸ್ಥಳಕ್ಕೆ ದಾವಿಸುತ್ತೆ ಈ ಸಂಸ್ಕಾರಿಗಳ ಗುಂಪು.
ಇಂತದ್ದೊಂದು ತಂಡ ಇರುವುದು ಗಣಿನಾಡು ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ, ಹೌದು ಅವರು ಬೇರಾರು ಅಲ್ಲ ಪಾಪುಲರ್ ಪ್ರಂಟ್ ಆಪ್ ಇಂಡಿಯಾದ ಸದಸ್ಯರು. ಸುಮಾರು ಇಪ್ಪತ್ತರಿಂದ ಮುವತ್ತು ಸದಸ್ಯರಿರುವ ಈ ತಂಡ ಕಳೆದ ನಾಲ್ಕು ತಿಂಗಳಲ್ಲಿ 75ಕ್ಕೂ ಹೆಚ್ಚು ಶವ ಸಂಸ್ಕಾರಗಳನ್ನ ಮಾಡಿದ್ದಾರೆ.
ಅಂದಹಾಗೆ ಇವರು ಮಾಡಿರುವ ಈ ಎಲ್ಲಾ ಶವ ಸಂಸ್ಕಾರಗಳು ಕೋವಿಡ್ ನಿಂದ ಸಾವಿಗೀಡಾಗಿರುವ ಶವಗಳೇ, ಇನ್ನು ಇವರು ಸಂಸ್ಕಾರಮಾಡುವ ಶವಗಳಿಗೆ ಜಾತಿ ಧರ್ಮಗಳ ಮಿತಿ ಇಲ್ಲ. ಯಾವುದೇ ಜಾತಿ ಧರ್ಮದ ಶವಗಳಾದರೂ ಸರಿ, ಅವರ ಧರ್ಮದ ಆಚಾರ ಪದ್ದತಿಯಂತೆ ಸಂಸ್ಕಾರಮಾಡಿ ಶವಗಳಿಗೆ ಮುಕ್ತಿ ನೀಡುತಿದ್ದಾರೆ.
ಅದರಂತೆ ನಿನ್ನೆ ಸಂಜೆ ಕೂಡ ಹೊಸಪೇಟೆ ತಾಲೂಕು ಕಮಲಾಪುರದಲ್ಲಿ ಸಚಿವ ಆನಂದ್ ಸಿಂಗ್ ಅವರ ಸಹೋದರ ಸಂಭಂದಿಯೊಬ್ಬರ ಶವ ಸಂಸ್ಕಾರಮಾಡಿದ್ದಾರೆ, ಕೊರೋನ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯನ್ನ ಅವರ ಧರ್ಮದ ಆಚಾರದಂತೆ ಎಲ್ಲಾ ವಿಧಿ ವಿದಾನಗಳನ್ನ ಪೂರೈಸಿ ಸಂಸ್ಕಾರ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಹೊಸಪೇಟೆ ನಗರದಲ್ಲಿ ಮಾತ್ರವಲ್ಲ ಗಣಿ ಜಿಲ್ಲೆಯಾಧ್ಯಂತ ಪ್ರಸಂಶೆ ವ್ಯಕ್ತವಾಗುತ್ತಿದೆ.
ಅದರಲ್ಲೂ ಕೊರೊನ ಸೋಂಕಿನಿಂದ ಸಾವಿಗೀಡಾಗಿದ್ದ ಶವಗಳ ಸಂಸ್ಕಾರಮಾಡುವುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೊವಾಗಿತ್ತು. ಆದ್ರೆ ಈ ತಂಡದ ಸದಸ್ಯರು ಕೈ ಜೋಡಿಸಿದಾಗಿನಿಂದ ಶವ ಸಂಸ್ಕಾರಕ್ಕೆ ಸಂಭಂದಿಸಿದ ಯಾವುದೇ ವಿವಾದಗಳು ತಲೆದೂರಿಲ್ಲ, ಶಿರಗುಪ್ಪ, ಮತ್ತು ಬಳ್ಳಾರಿ, ಸೇರಿದಂತೆ ಹೊಸಪೇಟೆ ತಾಲೂಕಿನಲ್ಲಿ ಈ ಸದಸ್ಯರ ತಂಡ ಸಕ್ರೀಯವಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ.