ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ 5.9 ತೂಕದ ಮಗುವಿಗ ಜನ್ಮ ನೀಡಿದ ಮಹಾತಾಯಿ!

ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಂಗಳವಾರ ಬರೋಬ್ಬರಿ 5.9 ಕೆಜಿ ತೂಕದ ಮಗುವೊಂದು ಜನಿಸಿದೆ. ಆಸ್ಪತ್ರೆಯ ಇತಿಹಾಸದಲ್ಲಿಯೇ ಇಷ್ಟು ಭಾರಿ ತೂಕದ ಮಗು ಹುಟ್ಟಿರುವುದು ಇದೇ ಮೊದಲು ಎಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಂಗಳವಾರ ಬರೋಬ್ಬರಿ 5.9 ಕೆಜಿ ತೂಕದ ಮಗುವೊಂದು ಜನಿಸಿದೆ. ಆಸ್ಪತ್ರೆಯ ಇತಿಹಾಸದಲ್ಲಿಯೇ ಇಷ್ಟು ಭಾರಿ ತೂಕದ ಮಗು ಹುಟ್ಟಿರುವುದು ಇದೇ ಮೊದಲು ಎಂದು ವರದಿಗಳು ತಿಳಿಸಿವೆ. 

ಪಶ್ಚಿಮ ಬಂಗಾಳ ಮೂಲಕ ಸರಸ್ವತಿ ಮತ್ತು ಯೋಗೇಶ್ ದಂಪತಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಜ.18ರಂದು ಈ ಭಾರಿ ತೂಕದ ಮಗು ಜನಿಸಿದೆ. ಸಾಮಾನ್ಯವಾಗಿ ಮಗುವಿನ ತೂಕ 1 ರಿಂದ 2.5 ಕೆಜಿ ತೂಕವಿರುತ್ತದೆ. ಕೆಲವೊಮ್ಮೆ ತಾಯಿಗೆ ಮಧುಮೇಹದ ಸಮಸ್ಯೆಯಿದ್ದರೆ ಮಗುವಿನ ತೂರ ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ಆದರೆ, ಈ ಭಾರಿ ಗಾತ್ರದ ಮಗುವಿನವ ತಾಯಿ ಸರಸ್ವತಿಗೆ ಮಧುಮೇಹವಿರಲಿಲ್ಲ. ಆದರೂ, ಕೂಡ 5.9 ಕೆಜಿ ತೂಕದ ಆರೋಗ್ಯವಂತ ಮಗು ಹುಟ್ಟಿರುವುದು ಸೋಜಿಗದ ಸಂಗತಿ ಎಂದು ವೈದ್ಯರು ಹೇಳುತ್ತಾರೆ. 

ದೈತ್ಯ ಮಗುವಾಗಿರುವ ಕಾರಣ ಹೆರಿಕೆ ವೇಳೆ ಚಿಕಿತ್ಸೆ ನೀಡಲು ಸಾಕಷ್ಟು ತೊಂದರೆ ಆಗಬಹುದು ಮತ್ತು ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಮ್ಮೆಲ್ಲಾ ಊಹೆಗಳು ಹುಸಿಯಾಗಿದ್ದು, ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಹೆರಿಗೆ ಸುಲಲಿತವಾಗಿ ನಡೆಯಿತು. 

ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಹುಟ್ಟಿದ ಕೂಡಲೇ ತೀವ್ರ ನಿಗಾಘಟಕದಲ್ಲಿ ಇಡಲಾಗಿತ್ತು. ನಂತರ ಸಾಮಾನ್ಯ ವಾರ್ಡ್'ಗೆ ಶಿಫ್ಟ್ ಮಾಡಲಾಗಿದೆ. ಮುಂದಿನ ಮೂರು ದಿನ ಆಸ್ಪತ್ರೆಯಲ್ಲಿಯೇ ತಾಯಿ ಮಗುವಿನ ಆರೋಗ್ಯದ ಮೇಲೆ ನಿಗಾವಹಿಸಿ ಅನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಾಣಿ ವಿಲಾಸ ವೈದ್ಯರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com