ರಾಜ್ಯ

ಪೊಲೀಸರಲ್ಲಿ ಹೆಚ್ಚುತ್ತಿದೆ ಮಹಾಮಾರಿ ವೈರಸ್, ಹೆಚ್ಚಿದ ಆತಂಕ!

ಪೊಲೀಸರಲ್ಲಿ ಹೆಚ್ಚುತ್ತಿದೆ ಮಹಾಮಾರಿ ವೈರಸ್, ಹೆಚ್ಚಿದ ಆತಂಕ!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವಾರಿಯರ್ಸ್'ಗೆ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ಬೆಳವಣಿಗೆ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. 

ರಾಜ್ಯದಲ್ಲಿ ಈ ವರೆಗೂ 102 ಮಂದಿ ಪೊಲೀಸರಿಗೆ ವೈರಸ್ ತಗುಲಿದ್ದು, ಇದರಲ್ಲಿ 66 ಮಂದಿ ಬೆಂಗಳೂರು ಪೊಲೀಸರಲ್ಲಿಯೇ ಹೆಚ್ಚು ವೈರಸ್ ಪತ್ತೆಯಾಗಿದೆ. ಅಲ್ಲದೆ, ಸೋಂಕಿತ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದ ಸಾವಿರಾರು ಪೊಲೀಸರು ಕ್ವಾರಂಟೈನ್ ನಲ್ಲಿದ್ದಾರೆ. ಇದರಲ್ಲಿ ಸಾಕಷ್ಟು ಜನರಿಗೆ ಲಕ್ಷಣ ರಹಿತ ಸೋಂಕು ಪತ್ತೆಯಾಗಿದೆ. ವೈರಸ್ ಹಬ್ಬುತ್ತಿದ್ದರೂ ನಾವು ಪೊಲೀಸರಿಗೆ ಕರ್ತವ್ಯ ನಿಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು  ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಹೇಳಿದ್ದಾರೆ. 

ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಪೊಲೀಸರಿರುವ ನಿವಾಸಗಳು ಹಾಗೂ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿರುವವರ ಕಂಡು ಹಿಡಿಯಲು ತಪಾಸಣೆಗಳನ್ನು ಹೆಚ್ಚಿಸಲಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಗೆ ಮಾಡಿದರೆ, ಕೆಲ ದಿನಗಳಿಂದ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ ಮೂರು ತಿಂಗಳಿಂದ ಇತರೆ ಜಿಲ್ಲೆಗಳಲ್ಲಿ ಸೋಂಕು ಪ್ರಕರಣ ಪತ್ತೆಯಾಗಿದೆ. ಇತರೆ ಜಿಲ್ಲೆಗಳಲ್ಲಿ ಪತ್ತೆಯಾಗಿರುವ 95 ಪ್ರಕರಣಗಳ ಪೈಕಿ 36 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 77 ಪ್ರಕರಣ ಪತ್ತೆಯಾಗಿದ್ದು 66 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ನಡುವಲ್ಲೂ ನಾಲ್ವರು ಪೊಲೀಸರು ಮಹಾಮಾರಿಗೆ ವೈರಸ್'ಗೆ ಬಲಿಯಾಗಿರುವುದು ದುರಾದೃಷ್ಟಕರ ವಿಚಾರ ಎಂದು ತಿಳಿಸಿದ್ದಾರೆ. 

ಆರೋಪಿಯೊಬ್ಬ ಠಾಣೆಗೆ ತರಲಾಗಿದ್ದು, ಆತನಲ್ಲಿ ವೈರಸ್ ವೈರಸ್ ಪತ್ತೆಯಾಗಿದೆ. ಇದರಿಂದ 8 ಮಂದಿ ಸಿಸಿಬಿ ಪೊಲೀಸರಲ್ಲೂ ವೈರಸ್ ದೃಢಪಟ್ಟಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನು 10-14 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಕಲಾಸಿಪಾಳ್ಯವನ್ನು ಬಿಬಿಎಂಪಿ ಸೀಲ್'ಡೌನ್ ಮಾಡಿದೆ. ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ನಡುವಲ್ಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂದಿದ್ದಾರೆ. 

ನಗರದಲ್ಲಿ 8 ಠಾಣೆಗಳು ಸೀಲ್'ಡೌನ್
ಈ ನಡುವೆ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ 8 ಪೊಲೀಸ್ ಠಾಣೆಗಲನ್ನು ಸೀಲ್'ಡೌನ್ ಮಾಡಲಾಗಿದೆ. 

ಮಾರತಳ್ಳಿ ಪೊಲೀಸ್ ಠಾಣೆ (4 ಪೊಲೀಸರಲ್ಲಿ ಸೋಂಕು), ಕಲಾಸಿಪಾಳ್ಯ (24), ಹಲಸೂರು (1) ಚಾಮರಾಜಪೇಟೆ, ತಿಲಕ್ ನಗರ, ಕೆಂಗೇರಿ, ಕಬ್ಬನ್ ಪಾರ್ಕ್, ವಿವಿ ಪುರಂ ಪೊಲೀಸ್ ಠಾಣೆಗಳನ್ನು ಸೀಲ್'ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.