ಬೆಂಗಳೂರು: ಮಾದಕ‌ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರ ಬಂಧನ,50 ಲಕ್ಷ ಮೌಲ್ಯದ ವಸ್ತುಗಳ ವಶ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 
ಬೆಂಗಳೂರು: ಮಾದಕ‌ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರ ಬಂಧನ: 50 ಲಕ್ಷ ಮೌಲ್ಯದ ವಸ್ತುಗಳ ವಶ
ಬೆಂಗಳೂರು: ಮಾದಕ‌ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರ ಬಂಧನ: 50 ಲಕ್ಷ ಮೌಲ್ಯದ ವಸ್ತುಗಳ ವಶ
Updated on

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹರಿ ಕೃಷ್ಣ ( 26), ಮುಹಮ್ಮದ್ ಫಿಬಿನ್ ( 24), ಹರಿ ಶಂಕರ್ ( 26), ರಾಹುಲ್ ಬಂಧಿತರು.ಇವರೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ.

ಬಂಧಿತರಿಂದ 7ಕೆಜಿ ತೂಕದ ಗಾಂಜಾ, 70ಎಲ್ ಎಸ್ ಡಿ ಸ್ಟ್ರಿಪ್ಸ್ ಗಳು, 12 ಕೆಜಿ 300 ಗ್ರಾಂ ತೂಕದ ಹ್ಯಾಶಿಶ್ ಆಯಿಲ್, 170 ಗ್ರಾಂ ಹ್ಯಾಶಿಶ್ ಉಂಡೆ, 5 ಮೊಬೈಲ್ ಫೋನ್, 3,000 ನಗದು ಸೇರಿ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಎಲ್ಲಾ ವಸ್ತುಗಳ ಮೌಲ್ಯ 50 ಲಕ್ಷ ರೂ ಗಳಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರೋಪಿಗಳು ಪ್ರತಿಷ್ಠಿತ ಕಾಲೇಜುಗಳು, ಪಬ್‍ಗಳು, ಐಟಿಬಿಟಿ ಸೆಕ್ಟರ್ ಗಳಿಗೆ ಮಾದಕವಸ್ತುಗಳ ಮಾರಾಟ ನಡೆಸಿದ್ದರು. ಕೆಆರ್ ಪುರ, ಮಾರತ್ತಹಳ್ಳಿ ಸುತ್ತಮುತ್ತಲಿನ ಕಾಲೇಜುಗಳ ಬಳಿ ಈ ದಂಧೆ ವ್ಯಾಪಕವಾಗಿ ನಡೆದಿತ್ತು. 

ಸಧ್ಯ ಈ ಸಂಬಂಧ  ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com