ಡ್ರಂಕ್ ಆ್ಯಂಡ್ ಡ್ರೈವ್ ಕೊರೋನಾಕ್ಕಿಂತ ಅಪಾಯಕಾರಿ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಡ್ರಂಕ್ ಆ್ಯಂಡ್ ಡ್ರೈವ್ ಕೊರೊನಾಗಿಂತ ಅಪಾಯಕಾರಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಡ್ರಂಕ್ ಆ್ಯಂಡ್ ಡ್ರೈವ್ ಕೊರೊನಾಗಿಂತ ಅಪಾಯಕಾರಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ನಗರದಲ್ಲಿ ನಾಲ್ಕು ಕೊರೊನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ನಗರದಲ್ಲಿ ಕೊರೊನಾ ಪತ್ತೆಯಾದರೂ ಡ್ರಂಕ್‌ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸುವ ಪ್ರಮೇಯವೇ ಇಲ್ಲ. ಡ್ರಂಕ್ ಆ್ಯಂಡ್ ಡ್ರೈವ್ ಕೊರೊನಾಕ್ಕಿಂತ ಅಪಾಯಕಾರಿ ಎಂದ ಅವರು, ಕೊರೊನಾ ವೈರಸ್ ತಡೆಯುವಿಕೆ ಕ್ರಮಗಳ ಕುರಿತಾಗಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದರು.

ಪೊಲೀಸರು  ಸದಾ ಸಾರ್ವಜನಿಕರೊಂದಿಗೆ  ಬೆರೆಯುವುದರಿಂದ, ಮಾಸ್ಕ್ ಬಳಕೆ ಮಾಡುವ ಮೂಲಕ ಮಾತಾಡುವಾಗ ಅಂತರ ಕಾಯ್ದುಕೊಳ್ಳಬೇಕು ಎಂದು ಆಯುಕ್ತರು ಸಿಬ್ಬಂದಿಗೆ ಸೂಚಿಸಿದ್ದಾರೆ.
ಅಲ್ಲದೇ, ಸಿಬ್ಬಂದಿಯಲ್ಲಿ ಯಾವುದೇ ಕಾಯಿಲೆ ಬಂದರೂ  ತಕ್ಷಣ ರಜೆ ನೀಡಲಾಗುವುದು. ಠಾಣಾ ವೆಚ್ಚದಲ್ಲಿ ಪೊಲೀಸರು ಶುಚಿತ್ವ ಕಾಪಾಡಿಕೊಳ್ಳಲು ಅಗತ್ಯ ವಸ್ತುಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆ ಮಾಡುವಾಗ ಪ್ರತಿಭಟನಕಾರರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ  ಸದ್ಯ ಪ್ರತಿಭಟನೆ ಮಾಡದಂತೆ ಅವರು ಮನವಿ ಮಾಡಿದರು‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com