ಕೊರೋನಾ ವೈರಸ್: ಡೇಂಜರ್ ಝೋನ್'ನತ್ತ ಭಾರತ, ಮುಂದಿನ ಹಂತ ಎದುರಿಸಲು ರಾಜ್ಯದಿಂದ ಸಿದ್ಧತೆ ಶುರು

ಈಗಾಗಲೇ ದೇಶ ಪ್ರವೇಶಿಸಿ ರುದ್ರತಾಂಡತವವಾಡಲು ಆರಂಭಿಸಿರುವ ಕೊರೋನಾ ವೈರಸ್, ಇದೀಗ 2ನೇ ಹಂತವನ್ನು ದಾಟಿ 3ನೇ ಹಂತ ಪ್ರವೇಶಿಸುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಈಗಾಗಲೇ ದೇಶ ಪ್ರವೇಶಿಸಿ ರುದ್ರತಾಂಡತವವಾಡಲು ಆರಂಭಿಸಿರುವ ಕೊರೋನಾ ವೈರಸ್, ಇದೀಗ 2ನೇ ಹಂತವನ್ನು ದಾಟಿ 3ನೇ ಹಂತ ಪ್ರವೇಶಿಸುವ ಹಂತದಲ್ಲಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ಕೆಲ ಆತಂಕಗಳು ಶುರುವಾಗಿವೆ. ಇದೀಗ ನಾವು ಆರಂಭಿಕ 3 ಮತ್ತು 4ನೇ ಹಂತ ತಲುಪುತ್ತಿದ್ದೇವೆ. ಈ ಹಂತ ತಲುಪಿದ್ದೇ ಆದರೆ, ಪರಿಸ್ಥಿತಿ ನಿಭಾಯಿಸುವುದು ಅತ್ಯಂತ ಕಠಿಣವಾಗಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 

ಮೊದಲನೇ ಹಂತದಲ್ಲಿ ಕೊರೋನಾ ಬಾಧಿತ ದೇಶಗಳಿಂದ ನಮ್ಮ ದೇಶಕ್ಕೆ ಬಂದವರಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿರುವುದಾಗಿದೆ. 

ಎರಡನೇ ಹಂತ ವಿದೇಶಗಳಿಂದ ಬಂದಿರುವವರ ಮೂಲಕ ಸ್ಥಳೀಯ ಜನರಿಗೆ ಸೋಂಕು ಹರಡುವುದಾಗಿದೆ. 

ಮೂರನೇ ಹಂತ ಒಂದು ಇಡೀ ಸಮುದಾಯಕ್ಕೇ ಕೊರೋನಾ ಅಂಟುವುದು. ಹೆಚ್ಚು ಪ್ರದೇಶಗಳನ್ನು ಸಮಸ್ಯೆಗೀಡಾಗುವಂತೆ ಮಾಡುವುದಾಗಿದೆ. 

ಇನ್ನು ನಾಲ್ಕನೇ ಹಂತ ಇಟಲಿ, ಚೀನಾದಂತೆ ಸೋಂಕು ಸಾಂಕ್ರಾಮಿಕ ಪಿಡುಗು ಎಂದು ಪರಿವರ್ತನೆಗೊಳ್ಳುವುದಾಗಿದೆ. ಇದೀಗ 3 ಮತ್ತು ನಾಲ್ಕನೇ ಹಂತದತ್ತ ದೇಶ ಸಾಗುತ್ತಿದ್ದು, ಪ್ರಸ್ತುತ ಭಾರತ ಡೇಂಜರ್ ಝೋನ್ ನಲ್ಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 

ವಿಶ್ವ ಆರೋಗ್ಯ ಸಂಸ್ಥೆ ಆರಂಭದಲ್ಲಿ ವೈರಸ್'ಗೆ 15 ದಿನಗಳ ಕಾಲಾವಧಿ ಇರುತ್ತದೆ ಎಂದು ಹೇಳಿತ್ತು. ಆದರೆ, ಪ್ರೋಟೋಕಾಲ್ ನಲ್ಲಿ 28 ದಿನಗಳ ಕಾಲ ಸಂಪರ್ಕ ತಡೆಯಿರಬೇಕೆಂದು ಹೇಳಲಾಗಿದೆ. ಹೀಗಾಗಿ ವೈರಸ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು 34-35 ದಿಗಳ ವರೆಗೆ ಸಂಪರ್ಕ ತಡೆಯಿರಬೇಕಾಗುತ್ತದೆ ಎಂದು ಸುಧಾಕರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com