

ಬೆಂಗಳೂರು: ವೃದ್ಧ ದಂಪತಿಗಳನಮ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಕೋಣನಕುಂಟೆ ಹತ್ತಿರದ ಆರ್ಬಿಐ ಲೇಔಟ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗೋವಿಂದಪ್ಪ(65), ಶಾಂತಮ್ಮ(55) ಹತ್ಯೆಗೀಡಾದ ದಂಪತಿಗಳೆಂದು ಗುರ್ತಿಸಲಾಗಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೆತ್ತ ಮಗನೇ ಹತ್ಯೆ ಮಾಡಿರಬಹುದೆಂದು ಶಂಕಿಸಲಾಗುತ್ತಿದೆ.
ಮೃತ ಗೋವಿಂದಪ್ಪ ಅವರು ಆರ್ ಬಿಐ ನಿವೃತ್ತ ನೌಕರರಾಗಿದ್ದು, ಪುತ್ರ ನವೀನ್ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.