ಬೆಂಗಳೂರು: ಪತ್ನಿಯ ಶೀಲ ಶಂಕಿಸಿ, ಫೇಸ್ ಬುಕ್ ಸ್ನೇಹಿತರಿಗೆ ಖಾಸಗಿ ವಿಡಿಯೋ, ಫೋಟೋ ಕಳುಹಿಸಿದ ಪಾಪಿ ಪತಿ!

ವಿಚ್ಛೇದಿತೆಯನ್ನು ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಆಕೆಯ ಖಾಸಗಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. 
ಹರಿಕೃಷ್ಣ
ಹರಿಕೃಷ್ಣ

ಬೆಂಗಳೂರು: ವಿಚ್ಛೇದಿತೆಯನ್ನು ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಆಕೆಯ ಖಾಸಗಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾನೆ. 

ಕೃಷ್ಣರಾಜಪುರ ಬಳಿಯಿರುವ ಹೊಂಗಸಂದ್ರದ ನಿವಾಸಿ ಹರಿಕೃಷ್ಣ ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಈ ಸಂಬಂಧ ನೊಂದ ಪತ್ನಿ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸಂತ್ರಸ್ತೆಯ ದೂರಿನನ್ವಯ ಹರಿಕೃಷ್ಣನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

2015ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಸಂತ್ರಸ್ತೆಗೆ ಖಾಸಗಿ ಕಂಪನಿಯೊಂದರಲ್ಲಿ ಆರೋಪಿ ಹರಿಕೃಷ್ಣನ ಪರಿಚಯವಾಗಿತ್ತು. ನಂತರ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕವೂ ಸಂತ್ರಸ್ತೆ ಮಾಜಿ ಪತಿ ಜೊತೆ ಸಂಬಂಧ ಮುಂದುವರೆಸಿದ್ದಾಳೆ ಎಂದು ಶಂಕಿಸಿದ ಹರಿಕೃಷ್ಣ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. 

ಈ ಸಂಬಂಧ ಹಿಂದೆ ಒಂದು ಸಲ ಸಂತ್ರಸ್ತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇಬ್ಬರನ್ನೂ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಪೊಲೀಸರು ಕಳುಹಿಸಿದ್ದರು. ಇದಾದ ನಂತರ ಹರಿಕೃಷ್ಣ ಪತ್ನಿ ಜೊತೆಗಿದ್ದ ಖಾಸಗಿ ಕ್ಷಣಗಳನ್ನು ವಿಡಿಯೋ ಮತ್ತು ಫೋಟೋಗಳನ್ನು ಚಿತ್ರಿಸಿಕೊಂಡಿದ್ದಾನೆ. 

ಇದೀಗ ಮತ್ತೆ ಪತ್ನಿ ಜೊತೆ ಜಗಳವಾಡಿದ ಹರಿಕೃಷ್ಣ ಆಕೆಗೆ ಬುದ್ಧಿ ಕಳಿಸಬೇಕೆಂದು ತಾನು ಚಿತ್ರಿಸಿಕೊಂಡಿದ್ದ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದೇ ಅಲ್ಲದೆ ವಾಟ್ಸ್ ಆ್ಯಪ್ ನಲ್ಲಿ ಪತ್ನಿಯ ಸ್ನೇಹಿತರಿಗೂ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com