ನಿಯಮ ಉಲ್ಲಂಘಿಸಿದ ಸವಾರನಿಗೆ 42 ಸಾವಿರ ರೂ ದಂಡ, ದಂಡ ಕಟ್ಟಲಾಗದೇ ಗಾಡಿ ಬಿಟ್ಟು ಸವಾರ ಪರಾರಿ!

ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ದಂಡದ ಮೊತ್ತ ರೂ.42,000 ಹಣ ಪಾವತಿಸಲಾಗದೆ, ದ್ವಿಚಕ್ರ ವಾಹನವನ್ನೇ ಪೊಲೀಸರಿಗೆ ಬಿಟ್ಟು ಹೋಗಿದ್ದಾನೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿದ ಅರುಣ್ ಕುಮಾರ್
ಸಂಚಾರ ನಿಯಮ ಉಲ್ಲಂಘನೆ ಮಾಡಿದ ಅರುಣ್ ಕುಮಾರ್

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ದಂಡದ ಮೊತ್ತ ರೂ.42,000 ಹಣ ಪಾವತಿಸಲಾಗದೆ, ದ್ವಿಚಕ್ರ ವಾಹನವನ್ನೇ ಪೊಲೀಸರಿಗೆ ಬಿಟ್ಟು ಹೋಗಿದ್ದಾನೆ. 

ಸವಾರ ಅರುಣ್ ಕುಮಾರ್ ಅಂಬಾತ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಬಿಟ್ಟು ಹೋಗಿರುವ ಭೂಪ.  ಅರುಣ್ ದ್ವಿಚಕ್ರ ವಾಹನದಿಂದ 77 ಬಾರಿ ಸಂಚಾರ ನಿಯಮ ಉಲ್ಲಂಘನೆಯಾಗಿತ್ತು. ಹೀಗಾಗಿ ದಂಡ ವಿಧಿಸಿ ರಶೀದಿ ನೀಡಲಾಗಿದೆ. ವಾಹನ ಜಪ್ತಿ ಮಾಡಲಾಗಿದೆ. ವಾಹನ ಬಿಡಿಸಿಕೊಂಡು ಹೋಗಲು ಇದೂವರೆಗೆ ಆತ ಠಾಣೆಗೆ ಬಂದಿಲ್ಲ ಎಂದು ಮಡಿವಾಳ ಠಾಣೆ ಸಂಚಾರ ಪೊಲೀಸರು ಹೇಳಿದ್ದಾರೆ. 

ಮಡಿವಾಳ ಸಂಚಾರ ಪಿಎಸ್ಐ ಶಿವರಾಜ್ ಕುಮಾರ್ ಅಂಗಡಿ ಹಾಗೂ ಸಿಬ್ಬಂದಿ ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಮಡಿವಾಳ ವೃತ್ತದಲ್ಲಿ ಬಂದ ಅರುಣ್ ಕುಮಾರ್ ಅವರ ದ್ವಿಚಕ್ರ ವಾಹನ ತಡೆದು ತಪಾಸಣೆ ನಡೆಸಿದರು. 

ಅರುಣ್ ಕುಮಾರ್ ಇದೂವರೆಗೂ 77 ಬಾರಿ ನಿಯಮ ಉಲ್ಲಂಘಿಸಿದ್ದು, ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿಯೇ ಸವಾನಿಗೆ ದಂಡದ ರಶೀದಿ ನೀಡಿ, ವಾಹನ ಜಪ್ತಿ ಮಾಡಲಾಗಿದೆ. 

ಸವಾರ ಸೆಕೆಂಡ್ ಹ್ಯಾಂಡ್'ನಲ್ಲಿ ದ್ವಿಚಕ್ರ ವಾಹನ ಖರೀದಿಸಿದ್ದ. ಅದರ ಮೌಲ್ಯವೇ ಸದ್ಯ ರೂ.20 ಸಾವಿರದಿಂದ ರೂ.30 ಸಾವಿರ ಇರಬಹುದು. ಅದಕ್ಕಿಂತಲೂ ದಂಡದ ಮೊತ್ತವೇ ಹೆಚ್ಚಿದೆ. ಹೀಗಾಗಿಯೇ ದಂಡದ ರಶೀದಿ ತೆಗೆದುಕೊಂಡು ಹೋಗಿರುವ ಸವಾರ, ವಾಪಸು ಬಂದಿಲ್ಲ. ಆತ ನ್ಯಾಯಾಲಯದಲ್ಲಿ ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಹೋಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com