ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣ: ಮತ್ತೋರ್ವ ಆರೋಪಿ ಸಿಸಿಬಿ ಬಲೆಗೆ

ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಮತ್ತು ಅವರ ಸ್ನೇಹ ಬಳಗಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಆಫ್ರಿಕಾ ಮೂಲದ ಮತ್ತೊಬ್ಬ ಪೆಡ್ಲರ್ ಸಿಸಿಬಿ ಬಲೆಗೆ ಬುಧವಾರ ಬಿದ್ದಿದ್ದಾನೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಮತ್ತು ಅವರ ಸ್ನೇಹ ಬಳಗಕ್ಕೆ ಡ್ರಗ್ಸ್ ಪೂರೈಸುತ್ತಿದ್ದ ಆಫ್ರಿಕಾ ಮೂಲದ ಮತ್ತೊಬ್ಬ ಪೆಡ್ಲರ್ ಸಿಸಿಬಿ ಬಲೆಗೆ ಬುಧವಾರ ಬಿದ್ದಿದ್ದಾನೆ. 

ನೈಜಿರಿಯಾ ದೇಶದ ಬೆನಾಲ್ಡ್ ಉಡೇನ್ನಾ ಬಂಧಿತನಾಗಿದ್ದು, ಆರೋಪಿಯಿಂದ 12 ಗ್ರಾಂ ಕೊಕೇನ್, ಮೊಬೈಲ್ ಹಾಗೂ ಮೂರು ಮೊಬೈಲ್ ಸಿಮ್ ಗಳು ಜಪ್ತಿ ಮಾಡಲಾಗಿದೆ. 

ಪೇಜ್ ತ್ರಿ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ಬಹುಮುಖ್ಯ ಪೆಡ್ಲರ್ ಉಡೇನ್ನಾ ಆಗಿದ್ದಾನೆ. ತನಿಖೆಯಲ್ಲಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಮಾದಕ ಮಾರಾಟ ಜಾಲದ ಪ್ರಕರಣದ ತನಿಖೆ ವೇಳೆ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಪೂರೈಕೆಯಲ್ಲಿದ್ದಾರೆಂ ಎಂಬುದು ಗೊತ್ತಾಯಿತು. ಈ ಮಾಹಿತಿ ಮತ್ತಷ್ಟು ಶೋಧಿಸಿದಾಗ ಬಾಲ್ಡಿ, ಕೊಕೆ ಮತ್ತು ಜಾನ್ ಹೆಸರಿನಲ್ಲಿ ಬೆನಾಲ್ಟ್ ಒಬ್ಬಾತನೇ ದಂಧೆ ನಡೆಸುತ್ತಿರುವುದು ತಿಳಿಯಿದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com