ಕೋವಿಡ್-19 ನಡುವಲ್ಲೇ ಗದಗದಲ್ಲಿ ಮಿದುಳು ಜ್ವರದ ಆತಂಕ

ಸಾಂಕ್ರಾಮಿಕ ರೋಗ ಕೋವಿಡ್ ನಡುವಲ್ಲೇ ಗದಗದ ಜನತೆ ಮಿದುಳು ಜ್ವರ ಎಂಬ ಹೊಸ ಆತಂಕ ಶುರುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಗದಗ: ಸಾಂಕ್ರಾಮಿಕ ರೋಗ ಕೋವಿಡ್ ನಡುವಲ್ಲೇ ಗದಗ ಜನತೆಯಲ್ಲಿ ಮಿದುಳು ಜ್ವರ ಎಂಬ ಹೊಸ ಆತಂಕ ಶುರುವಾಗಿದೆ. 

ಜಿಲ್ಲೆಯ ನರೇಗಲ್ ಪಟ್ಟಣದ ಹಲವು ಜನರಲ್ಲಿ ಹಠಾತ್ ಜ್ವರ ಮತ್ತು ದೇಹದ ನೋವು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. 

ಕೋವಿಡ್ ಸೋಂಕು ತಗುಲಿದೆ ಎಂದು ತಿಳಿದು ಆಸ್ಪತ್ರೆಗೆ ದಾಖಲಾಗುತ್ತಿರುವ ಹಲವಾರು ಜನರು, ತಮಗೆ ಕೋವಿಡ್ ಅಲ್ಲ ಮಿದುಳು ಜ್ವರ ಇದೆ ಎಂಬ ಸತ್ಯ ತಿಳಿದು ಆಘಾತಕ್ಕೊಳಗಾಗುತ್ತಿದ್ದಾರೆ. 

ಮಿದುಳು ಜ್ವರ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದೀಗ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ರಚಿಸಿದ್ದು, ಪ್ರತೀ ಮನೆಗೂ ಭೇಟಿ ನೀಡಿ, ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com