ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಹೆಸರು ಹಿಂತೆಗೆತ: ಸ್ಥಳೀಯರ ಪ್ರತಿಭಟನೆಗೆ ಸಂದ ಜಯ

ಪ್ರಕರಣ ಸಂಬಂಧ ಆರ್ ಟಿ ಐ ಮಾಹಿತಿ ಪಡೆಯುವ ವೇಳೆ ನಾಮಫಲಕದಲ್ಲಿ ಹೆಸರು ಬದಲಾವಣೆ ಮಾಡಬೇಕಾದ ನಿಯಮವಿಲ್ಲ ಎನ್ನುವುದು ತಿಳಿದುಬಂದಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಾಮಫಲಕದಲ್ಲಿ ಅದಾನಿ ಏರ್ ಪೋರ್ಟ್ ಎಂದು ಬರೆಯಲಾಗಿತ್ತು. ಅದನ್ನು ಸ್ಥಳೀಯರು ವಿರೋಧಿಸಿದ್ದರು. ಸಾಮಾಜಿಕ ಸಂಘಟನೆಗಳು ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದವು. 

ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಅದಾನಿ ಸಮೂಹ ಸಂಸ್ಥೆ ವಹಿಸಿಕೊಂಡ ನಂತರ ನಾಮಫಲಕದಲ್ಲಿ ಅದಾನಿ ಏರ್ ಪೋರ್ಟ್ ಎಂದು ಬದಲಾಯಿಸಲಾಗಿತ್ತು ಎಂದು ಸಾಮಾಜಿಕ ಹೋರಾಟಗಾರ ದಿಲ್ ರಾಜ್ ಆಳ್ವಾ ಅವರು ಹೇಳಿದ್ದಾರೆ. 

ಅದಾನಿ ಸಮೂಹದ ಕ್ರಮಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ನಂತರ ಪ್ರಕರಣ ಸಂಬಂಧ ಆರ್ ಟಿ ಐ ಮಾಹಿತಿ ಪಡೆಯುವ ವೇಳೆ ನಾಮಫಲಕದಲ್ಲಿ ಹೆಸರು ಬದಲಾವಣೆ ಮಾಡಬೇಕಾದ ನಿಯಮವಿಲ್ಲ ಎನ್ನುವುದು ತಿಳಿದುಬಂದಿತ್ತು. 

ನಂತರ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮತ್ತು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ನೋಟೀಸ್ ಕಳುಹಿಸಲಾಗಿತ್ತು. ಅದರ ಫಲವಾಗಿ ಇದೀಗ ಅದಾನಿ ಹೆಸರು ಮಂಗಳೂ ಏರ್ ಪೋರ್ಟ್ ನಾಮಫಲಕದಿಂದ ತೆಗೆಯಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com