ಡ್ರಗ್ಸ್ ಸೇವಿಸಿ ರಸ್ತೆಯಲ್ಲಿ ಪುಂಡಾಟ: ಮೂವರು ಅಪ್ರಾಪ್ತರ ಬಂಧನ

ಡ್ರಗ್ಸ್ ಸೇವಿಸಿ ರಸ್ತೆಗಳಲ್ಲಿ ಪುಂಡಾಟ ನಡೆಸುತ್ತಿದ್ದ ಮೂವರು ಅಪ್ರಾಪ್ತರನ್ನು ಪುಲಿಕೇಶಿ ನಗರ ಪೊಲೀಸರು ಜೀವನಹಳ್ಳಿಯಲ್ಲಿ ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡ್ರಗ್ಸ್ ಸೇವಿಸಿ ರಸ್ತೆಗಳಲ್ಲಿ ಪುಂಡಾಟ ನಡೆಸುತ್ತಿದ್ದ ಮೂವರು ಅಪ್ರಾಪ್ತರನ್ನು ಪುಲಿಕೇಶಿ ನಗರ ಪೊಲೀಸರು ಜೀವನಹಳ್ಳಿಯಲ್ಲಿ ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.

ಮೂವರೂ ಡ್ರಗ್ಸ್ ಮತ್ತು ಮದ್ಯದ ಅಮಲಿನಲ್ಲಿದ್ದರು ಮತ್ತು ಅವರು ವಾಹನ ಚಾಲಕನನ್ನು ದರೋಡೆ ಮಾಡಲು ಪ್ರಯತ್ನಿಸಿದರು, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ, ಶನಿವಾರ ಕೂಡ ಬೀದಿ ನಾಯಿಯನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಇದೀಗ ಬಾಲಕರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com