ಕಿತ್ತಾಡಿಕೊಂಡ ಯುಕೆಜಿ ಮಕ್ಕಳು: ಹೊಡಿಬಡಿಗಿಳಿದ ಪೋಷಕರು, ಓರ್ವ ಆಸ್ಪತ್ರೆಗೆ ದಾಖಲು

ಶಾಲೆಗಳಲ್ಲಿ ಪುಟ್ಟಮಕ್ಕಳು ಕಿತ್ತಾಡಿಕೊಳ್ಳುವುದು ಸಾಮಾನ್ಯ. ಆದರೆ, ಇದೇ ವಿಚಾರಕ್ಕೆ ಮಕ್ಕಳಿಬ್ಬರ ಪೋಷಕರು ಕೈ-ಕೈ ಮಿಲಾಯಿಸಿಕೊಂಡು ಜಗಳ ಮಾಡಿರುವ ಘಟನೆಯೊಂದು ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಶಾಲೆಗಳಲ್ಲಿ ಪುಟ್ಟಮಕ್ಕಳು ಕಿತ್ತಾಡಿಕೊಳ್ಳುವುದು ಸಾಮಾನ್ಯ. ಆದರೆ, ಇದೇ ವಿಚಾರಕ್ಕೆ ಮಕ್ಕಳಿಬ್ಬರ ಪೋಷಕರು ಕೈ-ಕೈ ಮಿಲಾಯಿಸಿಕೊಂಡು ಜಗಳ ಮಾಡಿರುವ ಘಟನೆಯೊಂದು ವಿದ್ಯಾರಣ್ಯಪುರದಲ್ಲಿ ನಡೆದಿದೆ.

ಜಾಲಹಳ್ಳಿಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಮಕ್ಕಳು ಯುಕೆಜಿ ಓದುತ್ತಿದ್ದು, ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಮಗುವೊಂದು ಮತ್ತೊಂದು ಮಗುವಿಗೆ ಹೊಡೆದಿದೆ. ಹೊಡೆಸಿಕೊಂಡ ಮಗು ತನ್ನ ಪೋಷಕರಿಗೆ ಈ ವಿಚಾರವನ್ನು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಶಿಕ್ಷಕಿಗೆ ತಿಳಿಸಿದ್ದಾರೆ. ಇದರಿಂದ ಮತ್ತೊಂದು ಮಗುವಿನ ಪೋಷಕರು ಕೋಪಗೊಂಡಿದ್ದಾರೆ.

ದೂರು ನೀಡಿದ ಮಗುವಿನ ತಂದೆ ಮರು ದಿನ ಮಗುವನ್ನು ಶಾಲೆಗೆ ಬಿಡಲು ಬಂದಾಗ ಕೋಪಗೊಂಡಿದ್ದ ಮತ್ತೊಂದು ಮಗುವಿನ ತಾಯಿ ಇದ್ದಕ್ಕಿದ್ದಂತೆ ಜಗಳಕ್ಕಿಳಿದಿದ್ದಾರೆ. ಈ ಮಾತಿನ ಚಕಮಕಿ ನಂತರ ಕೈ-ಕೈ ಮಿಲಾಯಿಸುವವರೆಗೂ ಹೋಗಿದೆ.

ತಾರಾನಾಥ್ ಥಳಿತಕ್ಕೊಳಗಾದ ಮಗುವಿನ ತಂದೆಯಾಗಿದ್ದಾರೆ. ಜಾಲಹಳ್ಳಿಯ ನಿವಾಸಿಯಾಗಿರುವ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ದಾಳಿ ಸಂಬಂಧ ತಾರಾನಾಥ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ಮುಂದುವರೆಸುವ ಯಾವುದೇ ಉದ್ದೇಶ ನನಗಿರಲಿಲ್ಲ. ಹೊಟ್ಟೆಗೆ ಹೊಡೆದಿದ್ದ ಪರಿಣಾಮ ನಾನು ಆಸ್ಪತ್ರೆಗೆ ದಾಖಲಾಗಬೇಕಾಯಿತು. ಹೀಗಾಗಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಪೊಲೀಸರು ಆಸ್ಪತ್ರೆಯಿಂದಲೇ ನನ್ನ ಹೇಳಿಕೆ ದಾಖಲಿಸಿಕೊಂಡಿದ್ದಾರೆಂದು ಹೇಳಿದ್ದಾರೆ.

ನನ್ನ ಮಗನವಿಗೆ ಮಗುವೊಂದು ಪ್ರತೀನಿತ್ಯ ಹೊಡೆಯುತ್ತಲೇ ಇತ್ತು. ಡಿ.9 ರಂದು ಬಾಲಕನೊಂದಿಗೆ ಮಾತನಾಡಿ ಹೊಡೆಯದಂತೆ ಹೇಳಿದ್ದೆ. ಇದನ್ನು ನೋಡಿದ ಮಗುವಿನ ತಾಯಿ ಕೂಗಾಡಿದ್ದರು. 3 ದಿನಗಳ ಬಳಿಕ ಮತ್ತಿಬ್ಬರೊಂದಿಗೆ ಬಂದು ಜಗಳ ಮಾಡಿ ಹಲ್ಲೆ ನಡೆಸಿದರು. ಶಾಲೆಯ ಶಿಕ್ಷಕ ನನ್ನನ್ನು ರಕ್ಷಣೆ ಮಾಡಿದರು. ಈಗಲೂ ನನಗೆ ಪ್ರಕರಣ ಮುಂದುವರೆಸುವ ಆಸಕ್ತಿಯಿಲ್ಲ. ಬಾಲಕನ ಪೋಷಕರು ನನ್ನೊಂದಿಗೆ ಮಾತನಾಡಬೇಕೆಂದು ನಾನು ಬಯಸುತ್ತಿದ್ದೇನೆಂದು ತಿಳಿಸಿದ್ದಾರೆ.

ಮಕ್ಕಳ ವಿಚಾರಕ್ಕೆ ಪೋಷಕರೊಬ್ಬರು ಮತ್ತೊಬ್ಬ ಪೋಷಕರ ಮೇಲೆ ಹಲ್ಲೆ ನಡೆಸಿರವುದು ನಿಜಕ್ಕೂ ವಿಚಿತ್ರವೆಂದು ಎನಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಐಪಿಸಿ ಸೆಕ್ಷನ್ 324ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com