ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಆಟೋ; ಇಬ್ಬರು ಸಾವು, ಐವರು ನಾಪತ್ತೆ

ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ ಕಾಲುವೆಗೆ ಪಲ್ಟಿಯಾಗಿ ಬಿದ್ದು ಇಬ್ಬರು ಮೃತಪಟ್ಟು ನಾಲ್ಕೈದು ಮಂದಿ ನಾಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಬಳಿ ಹೆಚ್ ಎಲ್ ಸಿ ಕಾಲುವೆ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬಳ್ಳಾರಿ: ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ ಕಾಲುವೆಗೆ ಪಲ್ಟಿಯಾಗಿ ಬಿದ್ದು ಇಬ್ಬರು ಮೃತಪಟ್ಟು ನಾಲ್ಕೈದು ಮಂದಿ ನಾಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಕೊಳಗಲ್ಲು ಗ್ರಾಮದ ಬಳಿ ಹೆಚ್ ಎಲ್ ಸಿ ಕಾಲುವೆ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಇಂದು ಬೆಳಗ್ಗೆ ಭೀಮಾ ಎಂಬುವವರು ಚಾಲನೆ ಮಾಡುತ್ತಿದ್ದ ಆಟೋದಲ್ಲಿ 9 ಮಂದಿ ಮಹಿಳಾ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ವೇಳೆ ಆಟೋ ಕಾಲುವೆ ಬಳಿ ಆಯತಪ್ಪಿ ಬಿದ್ದಿತು. ಆಟೋ ಮುಳುಗಿದ್ದು ಇಬ್ಬರು ಕಾರ್ಮಿಕರಾದ 40 ವರ್ಷದ ದುರ್ಗಮ್ಮ ಮತ್ತು 38 ವರ್ಷದ ನಿಂಗಮ್ಮ ಮೃತಪಟ್ಟಿದ್ದಾರೆ. ಮತ್ತಿಬ್ಬರು ಕಾರ್ಮಿಕರಾದ ದಮ್ಮುರು ಯರೆಮ್ಮ ಹಾಗೂ ಹೇಮಾವತಿ ಎಂಬುವವರು ಈಜಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

ನಾಪತ್ತೆಯಾಗಿರುವವರಿಗಾಗಿ ಶೋಧಕಾರ್ಯ ನಡೆಯುತ್ತಿದ್ದು ಕೂಲಿ ಕಾರ್ಮಿಕರು ಕೊಳಗಲ್ಲು ಗ್ರಾಮದಿಂದ ಕೃಷ್ಣಾನಗರಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ. ಬಳ್ಳಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com