ಕೊಪ್ಪಳ: ಲೋನ್ ಕೊಡಿಸುವ ನೆಪದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ; ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಚಪ್ಪಲಿಯಲ್ಲಿ ಥಳಿತ

ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಹಿಡಿದು ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳ ಜಿಲ್ಲೆಯ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಪ್ಪಳ: ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಹಿಡಿದು ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳ ಜಿಲ್ಲೆಯ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯಮನೂರ, ಮಹಿಳೆಯಿಂದ ಏಟು ತಿಂದ ವ್ಯಕ್ತಿ. ಗೋದಾವರಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯಮನೂರಪ್ಪ, ಲೋನ್ ಕೊಡಿಸುವ ನೆಪದಲ್ಲಿ , ಮೈಕ್ರೋ ಫೈನಾನ್ಸ್ ಮಹಿಳಾ ಗುಂಪಿನ ಸದಸ್ಯೆ ನಾಗಮ್ಮ ಎಂಬ ವಿವಾಹಿತ ಮಹಿಳೆ ಮೇಲೆ ಕಣ್ಣಾಕಿದ್ದಾನೆ.

 ನಾಗಮ್ಮನಿಗೆ ಗುಂಪಿನ ಅನುಸಾರ ಲೋನ್ ಮಂಜೂರಾಗಿತ್ತಂತೆ. ಆದರೆ ಯಮನೂರಪ್ಪ ನಾಗಮ್ಮನಿಗೆ ಲೋನ್ ಕೊಡುವಾಗ ತಕರಾರು ಮಾಡಿದ್ದಾನೆ. ಅಲ್ಲದೇ ಲೋನ್ ಬೇಕೆಂದರೆ ತನ್ನ ಜೊತೆ ಒಂದು ದಿನ ಕಾಲ ಕಳೆಯುವಂತೆ ಹೇಳಿದ್ದಾನೆ. ಯಮನೂರಪ್ಪ ವರ್ತನೆಗೆ ನಾಗಮ್ಮ ಹಾಗೂ ಆಕೆಯ ತಾಯಿ ಆತನನ್ನು ಹಿಡಿದು ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಮೈಕ್ರೋ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಮೇಲೆ ನಾಗಮ್ಮ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com