Bengaluru Rental yields: ಬೆಂಗಳೂರಿನಲ್ಲಿ ಬಾಡಿಗೆಯಿಂದ ಆದಾಯ ಪ್ರಮಾಣ ಹೆಚ್ಚಳ, 2ನೇ ಸ್ಥಾನದಲ್ಲಿ ಮುಂಬೈ!

ದೇಶದ ಪ್ರಮುಖ ನಗರಗಳ ಪೈಕಿ ಬಾಡಿಗೆ ಪ್ರಮಾಣ ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈ 2ನೇ ಸ್ಥಾನಕ್ಕೆ ಕುಸಿದಿದೆ.
Bengaluru Rental yields
ಬೆಂಗಳೂರಿನಲ್ಲಿ ಬಾಡಿಗೆ
Updated on: 

ನವದೆಹಲಿ: ದೇಶದ ಪ್ರಮುಖ ನಗರಗಳ ಪೈಕಿ ಬಾಡಿಗೆ ಪ್ರಮಾಣ ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈ 2ನೇ ಸ್ಥಾನಕ್ಕೆ ಕುಸಿದಿದೆ.

ಸಾವಿರಾರು ಐಟಿ ಸಂಸ್ಥೆಗಳಿಗೆ ತವರೂರಾಗಿರುವ ಬೆಂಗಳೂರಿನಲ್ಲಿ ಮೊದಲ ತ್ರೈಮಾಸಿಕ (ಜನವರಿ-ಮಾರ್ಚ್)ದಲ್ಲಿ ಗರಿಷ್ಠ ಅಂದರೆ ಶೇ.4.45% ರಷ್ಟು ಹೆಚ್ಚಿನ ಬಾಡಿಗೆ ಆದಾಯವನ್ನು ಹೊಂದಿದೆ.

ಈ ಪಟ್ಟಿಯಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈ 2ನೇ ಸ್ಥಾನಕ್ಕೆ ಕುಸಿದಿದ್ದು, ಮುಂಬೈನ ಬಾಡಿಗೆ ಆದಾಯ ಶೇ.4.15ರಷ್ಟು ಏರಿಕೆಯಾಗಿದ್ದು, ಗುರುಗ್ರಾಮದಲ್ಲಿ ಶೇ. 4.1%ರಷ್ಟು ಬಾಡಿಗೆ ಆದಾಯ ಏರಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ Anarock ತನ್ನ ದತ್ತಾಂಶಗಳಲ್ಲಿ ಉಲ್ಲೇಖಿಸಿದೆ.

ಪ್ರಮುಖವಾಗಿ ಕೋವಿಡ್ ನಂತರದ ದಿನಗಳಲ್ಲಿ ಐಟಿ ಸಂಸ್ಥೆಗಳು ವರ್ಕ್ ಫ್ರಂ ಹೋಮ್ ಕೈ ಬಿಟ್ಟು ಕಚೇರಿಗೆ ಆಗಮಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಬಾಡಿಗೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಕೋವಿಡ್ ಪೂರ್ವ ಅಂದರೆ 2019 ರಲ್ಲಿ ನಗರದ ದೇಶದಲ್ಲಿ ಒಟ್ಟಾರೆ ಬಾಡಿಗೆ ಆದಾಯ 3.6% ರಷ್ಟಿತ್ತು. ಮುಂಬೈ ಮತ್ತು ಗುರುಗ್ರಾಮದಲ್ಲಿ ಈ ಪ್ರಮಾಣ 3.5 ರಷ್ಟಿತ್ತು. ಬಳಿಕ ಈ ಪ್ರಮಾಣ ಶೇ.24ರಷ್ಟು ಬೆಳವಣಿಗೆಯಾಗಿದೆ.

ಅಂತೆಯೇ ಕೋವಿಡ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಬಾಡಿಗೆ ಆದಾಯ ದೀರ್ಘಕಾಲಿಕವಾಗಿ ಹಿನ್ನಡೆ ಅನುಭವಿಸಿತ್ತು. ಆದರೆ ಕೋವಿಡ್ ನಂತರ ಬಾಡಿಗೆ ಆದಾಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಸರಾಸರಿ 3ರಷ್ಟಿದ್ದ ಬಾಡಿಗೆ ಆದಾಯ ಈಗ ಸರಾಸರಿ 4ಕ್ಕೆ ಏರಿಕೆಯಾಗಿದೆ. ಕಚೇರಿಗಳು, ಐಟಿ ಸಂಸ್ಥೆಗಳು, ಕಾರ್ಖಾನೆಗಳು ಪುನರಾರಂಭಗೊಂಡ ನಂತರ ದೇಶದಲ್ಲಿ ಬಾಡಿಗೆ ಬೇಡಿಕೆಯು ಗಗನಕ್ಕೇರುತ್ತಿದೆ. ಬೆಂಗಳೂರು,ಮುಂಬೈ, ಗುರುಗ್ರಾಮ, ಪುಣೆ, ನೋಯ್ಡಾ, ಹೈದರಾಬಾದ್ ನಂತಹ ಐಟಿ ಪ್ರಾಬಲ್ಯ ಹೊಂದಿರುವ ನಗರಗಳಲ್ಲಿ ಬಾಡಿಗೆ ಪ್ರಮುಖ ಏರಿಕೆಯನ್ನು ಕಂಡಿವೆ ಎಂದು ಅನರಾಕ್ ಗ್ರೂಪ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ.

Bengaluru Rental yields
ಬೆಂಗಳೂರು: 7 ವರ್ಷಗಳಲ್ಲಿ 'ಇಮ್ಯುನೊ ಡಿಫಿಷಿಯನ್ಸಿ' ಪ್ರಕರಣಗಳಲ್ಲಿ 4 ಪಟ್ಟು ಹೆಚ್ಚಳ!

ದೇಶದ ಪ್ರಮುಖ 7 ನಗರಗಳಲ್ಲಿ, Q1, 2024 ರಲ್ಲಿ ವಸತಿ ಬಾಡಿಗೆಗಳಲ್ಲಿ ಸರಾಸರಿ 4-9% ಜಿಗಿತ ಕಂಡುಬಂದಿದ್ದು, ವಿಶಿಷ್ಟ ವಾರ್ಷಿಕ ಏರಿಕೆಯು 5-10%ರಷ್ಟಿದೆ. ಇದು ಗಮನಾರ್ಹವಾಗಿ ಉತ್ತಮವಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ 2023ರ Q4ರಲ್ಲಿ ಸರಾಸರಿ ಮಾಸಿಕ ಬಾಡಿಗೆಯು 1,000 ಚದರ ಅಡಿಗಳ ಪ್ರಮಾಣಿತ 2 BHK ಫ್ಲಾಟ್‌ಗೆ 31,600 ರೂ.ಗಳಷ್ಟಿತ್ತು. Q1, 2024 ರಲ್ಲಿ, ಇದು ತಿಂಗಳಿಗೆ 34,000 ರೂ.ಗೆ ಏರಿದೆ ಎಂದು ದತ್ತಾಂಶಗಳು ತೋರಿಸಿದೆ. ಅಂತೆಯೇ ವೈಟ್‌ಫೀಲ್ಡ್ ಸರಾಸರಿ ಮಾಸಿಕ ಬಾಡಿಗೆಗಳು 2023 ರ Q4 ರಲ್ಲಿ 30,200 ರಿಂದ 2024 ರ Q1 ರಲ್ಲಿ 32,500 ಕ್ಕೆ ಅಂದರೆ ಶೇ. 8%ರಷ್ಟು ಜಿಗಿತವನ್ನು ಕಂಡಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com