ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ‌ ಆರೋಪ; ವೈದ್ಯನ ವಿರುದ್ಧ ದೂರು ದಾಖಲಿಸಿದ ಮಹಿಳೆ

ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳಾಯೊಬ್ಬರಿಗೆ ಜೂನಿಯರ್ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳಾಯೊಬ್ಬರಿಗೆ ಜೂನಿಯರ್ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಜೂನಿಯರ್ ವೈದ್ಯ ಡಾ.ರಾಜು ಎಂಬಾತ ಕಿಮ್ಸ್ ಆಸ್ಪತ್ರೆಯ ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ಮಹಿಳಾ ವೈದ್ಯೆ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆಂದು ಆರೋಪಿಸಲಾಗಿದೆ. ಅಲ್ಲದೇ, ರಾಜು ತನ್ನನ್ನು ಹಿಂಬಾಲಿಸುತ್ತಿದ್ದು, ಮೈ ಕೈ ಮುಟ್ಟುತ್ತಿದ್ದಾನೆ. ಜತೆಗೆ ತನ್ನ ಬಗ್ಗೆ ಕಾಲೇಜಿನಲ್ಲಿ ಕೆಟ್ಟದಾಗಿ ಹೇಳಿಕೊಂಡು ಬರುತ್ತಿದ್ದಾನೆ.

ಜನವರಿ 19ರಂದು ಪ್ರಾಂಶುಪಾಲರ ಮುಂದೆಯೂ ನನಗೆ ಅವಮಾನ ಮಾಡಿದ್ದ. ಈ ಘಟನೆಯಿಂದ ನೊಂದು ಪ್ರಾಂಶುಪಾಲರಿಗೆ ದೂರು ನೀಡಿದ್ದೆ. ಬಳಿಕ ನನ್ನ ಕೋಣೆಗೆ ನುಗ್ಗಿ ಪ್ರಾಂಶುಪಾಲರಿಗೆ ನೀಡಿದ ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದ. ಇದಲ್ಲದೆ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ದೈಹಿಕ ಸಂಪರ್ಕವನ್ನೂ ಮಾಡಿದ್ದ. ಕೋಣೆಯಲ್ಲಿ ಇರುವ ಇತರರ ಮುಂದೆ ನನ್ನೊಂದಿಗೆ ಸಂಬಂಧದಲ್ಲಿದ್ದಾಳೆಂದು ಹೇಳಿದ್ದ ಎಂದು ಮಹಿಳೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ, ವೈದ್ಯೆ ಮಾಡಿರುವ ಆರೋಪ ಸಾಬೀತಾದರೆ ವೈದ್ಯ ರಾಜು ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com