ಬೆಂಗಳೂರು: ತನ್ನ ಬಿಟ್ಟು ಬೇರೊಬ್ಬನೊಂದಿಗೆ ತಿರುಗುತ್ತಿದ್ದ ಪತ್ನಿಗೆ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿದ ವ್ಯಕ್ತಿ!

ಬೆಂಗಳೂರಿನ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ನಡುರಸ್ತೆಯಲ್ಲೇ ಪತ್ನಿಯ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಆರೋಪಿ ಶೇಕ್ ಮುಜೀಬ್
ಆರೋಪಿ ಶೇಕ್ ಮುಜೀಬ್

ಬೆಂಗಳೂರು: ಬೆಂಗಳೂರಿನ ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ನಡುರಸ್ತೆಯಲ್ಲೇ ಪತ್ನಿಯ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ತನ್ನಿಂದ ದೂರಾಗಿದ್ದ ಪತ್ನಿ ಮತ್ತೊಬ್ಬನೊಂದಿಗೆ ಹೋಗುವುದನ್ನು ಕಂಡ ಪತಿ ನಡುರಸ್ತೆಯಲ್ಲೇ ಮಚ್ಚಿನಿಂದ ಹಲ್ಲೆಯನ್ನು ನಡೆಸಿದ್ದಾನೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಹೆಚ್ಎಎಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿ ಶೇಕ್ ಮುಜೀಬ್ ತನ್ನ ಪತ್ನಿ 28 ವರ್ಷದ ನೈಗರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇವರು ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಬೇರ್ಪಟ್ಟಿದ್ದರು. ನಂತರ ನೈಗರ್‌ ಆರು ತಿಂಗಳ ನಂತರ ಮತ್ತೊಬ್ಬ ವ್ಯಕ್ತಿ ಸಲೀಂ ಎಂಬಾತನ ಜತೆ ಸಂಬಂಧ ಹೊಂದಿದ್ದಳು. ನಿನ್ನೆ ಸಂಜೆ ಪತ್ನಿ ನೈಗರ್‌ ಸಲೀಂ ಜತೆಗೆ ಹೋಗುತ್ತಿರುವುದನ್ನು ಕಂಡ ಶೇಕ್‌ ಮುಜೀಬ್‌ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದನು.

ಆರೋಪಿ ಶೇಕ್ ಮುಜೀಬ್
ಗೋಕರ್ಣ: ಡ್ರಗ್ಸ್ ನಶೆಯಲ್ಲಿ ಪೊಲೀಸರ ಮೇಲೆ ಹಲ್ಲೆ; ಬೆಂಗಳೂರಿನ ಇಬ್ಬರು ಮಹಿಳಾ ಟೆಕ್ಕಿಗಳ ಬಂಧನ

ಘಟನಾ ಸ್ಥಳಕ್ಕೆ ಜೆ.ಬಿ ನಗರ ಪೊಲೀಸರು ಆಗಮಿಸಿ ಆರೋಪಿ ಶೇಖ್ ಮುಜಿಬ್‌ನನ್ನು ಬಂಧಿಸಿದ್ದಾರೆ. ಮುಜಿಬ್ ವಿರುದ್ಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ 307 ಕೇಸ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com