ಚಿತ್ರದುರ್ಗ: ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವು, ಇಬ್ಬರಿಗೆ ಗಾಯ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ಭಾನುವಾರ ನಡೆದಿದೆ. 
ಸುಟ್ಟು ಕರಕಲಾದ ಬೀದಿ ಬದಿ ಹೋಟೆಲ್
ಸುಟ್ಟು ಕರಕಲಾದ ಬೀದಿ ಬದಿ ಹೋಟೆಲ್
Updated on

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ಭಾನುವಾರ ನಡೆದಿದೆ. 

ಮೃತ ಮಹಿಳೆಯನ್ನು ಲಕ್ಷ್ಮಮ್ಮ(38) ಎಂದು ಗುರುತಿಸಲಾಗಿದ್ದು, ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿವೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಮೇಶ್ ಎಂಬುವವರ ಬೀದಿ ಬದಿ ಹೋಟೆಲ್​​ಗೆ ಬೆಂಕಿ ಬಿದ್ದಿದ್ದು, ವಿಚಾರ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿದ್ದ ಮಹಿಳಾ ಕಾರ್ಮಿಕರು ಬೀದಿ ಬದಿ ಹೋಟೆಲ್​​ನತ್ತ ಧಾವಿಸಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಸಿಲಿಂಡರ್​ ಸ್ಪೋಟಗೊಂಡಿದೆ.

ಸಿಲಿಂಡರ್​ ಸ್ಪೋಟದಿಂದ ಸ್ಥಳದಲ್ಲಿದ್ದ ಮಹಿಳಾ ಕಾರ್ಮಿಕ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com