
ಬೆಂಗಳೂರು: ಈಗ ಬೇಸಿಗೆ ರಜೆ ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹಲವು ವಿಶೇಷ ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಬೆಂಗಳೂರು ಟು ಮಧುರೈ, ಯಶವಂತಪುರ ಟು ವಿಜಯಪುರ ಮತ್ತು ಬೆಂಗಳೂರು ಟು ಬೆಳಗಾವಿ ಮಧ್ಯೆ ಈ ವಿಶೇಷ ರೈಲುಗಳು ಸಂಚರಿಸಲಿವೆ.
ಬೆಂಗಳೂರು ಟು ಮಧುರೈ
ರೈಲು ಸಂಖ್ಯೆ 06521: ಎಸ್ಎಂವಿಟಿ ಬೆಂಗಳೂರು ಟು ಮಧುರೈ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 30 ರಂದು SMVT ಬೆಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 06:15 ಗಂಟೆಗೆ ಮಧುರೈ ತಲುಪಲಿದೆ.
ರೈಲು ಸಂಖ್ಯೆ 06522: ಮಧುರೈ ಟು ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 1 ರಂದು ಮಧುರೈನಿಂದ ಬೆಳಿಗ್ಗೆ 09:10 ಗಂಟೆಗೆ ಹೊರಟು ಅದೇ ದಿನ ಸಂಜೆ 7:50 ಗಂಟೆಗೆ ಬೆಂಗಳೂರು ತಲುಪಲಿದೆ.
ಈ ರೈಲುಗಳು ಎರಡೂ ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗಲ್ ಮತ್ತು ಕೊಡೈಕೆನಾಲ್ ರಸ್ತೆ ನಿಲುಗಡೆ ಹೊಂದಿವೆ.
ಯಶವಂತಪುರ ಟು ವಿಜಯಪುರ
ರೈಲು ಸಂಖ್ಯೆ 06561: ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 30 ರಂದು ಯಶವಂತಪುರದಿಂದ ರಾತ್ರಿ 10 ಗಂಟೆಗೆ ಹೊರಟು, ಮರುದಿನ ಮಧ್ಯ 02:05 ಗಂಟೆಗೆ ವಿಜಯಪುರ ತಲುಪುತ್ತದೆ.
ರೈಲು ಸಂಖ್ಯೆ 06562: ವಿಜಯಪುರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ವಿಜಯಪುರದಿಂದ ಮೇ 1ರಂದು ಸಂಜೆ 07 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 11:15 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.
ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿಯಲ್ಲಿ ನಿಲುಗಡೆ ಹೊಂದಿವೆ.
ಬೆಂಗಳೂರು ಟು ಬೆಳಗಾವಿ
ರೈಲು ಸಂಖ್ಯೆ 06551: SMVT ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 30 ಮತ್ತು ಮೇ 2ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 07:30 ಗಂಟೆಗೆ ಬೆಳಗಾವಿಗೆ ತಲುಪಲಿದೆ.
ರೈಲು ಸಂಖ್ಯೆ 06552: ಬೆಳಗಾವಿ-SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಿಂದ ಮೇ 1ರಂದು ಮತ್ತು ಮೇ 3ರಂದು ಸಂಜೆ 05:30 ಗಂಟೆಗೆ ಹೊರಟು ಮರುದಿನ ಸಂಜೆ 04:30 ಗಂಟೆಗೆ SMVT ಬೆಂಗಳೂರಿಗೆ ಆಗಮಿಸಲಿದೆ.
ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರದಲ್ಲಿ ನಿಲುಗಡೆ ಹೊಂದಿವೆ.
Advertisement