ಉಡುಪಿಯಲ್ಲಿ ಅಣ್ಣ-ತಂಗಿ ನೇಣಿಗೆ ಶರಣು; ಆತ್ಮಹತ್ಯೆಗೆ ಕಾರಣ ನಿಗೂಢ

ಮೃತರನ್ನು ಮಲ್ಲೇಶ್(23) ಮತ್ತು ಪವಿತ್ರಾ(17) ಎಂದು ಗುರುತಿಸಲಾಗಿದ್ದು, ಪವಿತ್ರಾ ಅವರ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
Brother and Sister die by Suicide in Udupi
ಸಾಂದರ್ಭಿಕ ಚಿತ್ರ
Updated on: 

ಉಡುಪಿ: ಅಣ್ಣ-ತಂಗಿ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶುಕ್ರವಾರ ಉಡುಪಿಯ ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ.

ಮೃತರನ್ನು ಮಲ್ಲೇಶ್(23) ಮತ್ತು ಪವಿತ್ರಾ(17) ಎಂದು ಗುರುತಿಸಲಾಗಿದ್ದು, ಪವಿತ್ರಾ ಅವರ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ಇವರು ಸ್ವಂತಃ ಅಣ್ಣ-ತಂಗಿ ಅಲ್ಲ. ಆದರೆ ಅಕ್ಕ, ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

Brother and Sister die by Suicide in Udupi
ಕಲಬುರಗಿ: 3 ತಿಂಗಳಿಂದ ಸಿಗದ ವೇತನ; ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆ

ಬೇರೊಂದು ಮನೆಯಲ್ಲಿ ಕೆಲಸ ಮಾಡಿ , ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ ಪಿಯುಸಿ ಓದುತ್ತಿದ್ದರು. ಸಹೋದರ ಸಂಬಂಧಿ ಮಲ್ಲೇಶ ವಾರದ ಹಿಂದಷ್ಟೇ ಗಾರೆ ಕೆಲಸಕ್ಕೆ ಎಂದು ಉಡುಪಿಗೆ ಬಂದಿದ್ದ. ಆತನ ತಾಯಿ ಮತ್ತು ಪವಿತ್ರಾ ಅವರ ತಾಯಿ ಹನುಮವ್ವ ಅಕ್ಕ-ತಂಗಿಯಾಗಿರುವ ಕಾರಣ ಚಿಕ್ಕಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ.

ಹನುಮವ್ವ ರಾಯಚೂರಿಗೆ ಹೋಗಿದ್ದ ಸಂದರ್ಭ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com