ಕೋಲಾರ: ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲು; ಅಷ್ಟಕ್ಕೂ ಆಗಿದ್ದೇನು?

ಮೃತ ಮಹಿಳೆಯರು ನಿಸಾರ್ ನಗರದ ನಿವಾಸಿಗಳಾಗಿದ್ದು, ಸದ್ಯ ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Two Women Drown Trying To Rescue Kids In Kolar
ಇಬ್ಬರು ಮಹಿಳೆಯರು ನೀರುಪಾಲು
Updated on

ಕೋಲಾರ: ಕೋಲಾರದ ಅರಹಳ್ಳಿ ಕೆರೆಗೆ ಬಿದ್ದಿದ್ದ ಮಕ್ಕಳನ್ನ ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲಾದ ದಾರುಣ ಘಟನೆ ಸೋಮವಾರ ನಡೆದಿದೆ.

ಮೃತ ಮಹಿಳೆಯರನ್ನು ಮೊಹಮದಿ(25) ಮತ್ತು ಸಲ್ಮಾ(26) ಎಂದು ಗುರುತಿಸಲಾಗಿದೆ.

ಮೃತ ಮಹಿಳೆಯರು ನಿಸಾರ್ ನಗರದ ನಿವಾಸಿಗಳಾಗಿದ್ದು, ಸದ್ಯ ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Two Women Drown Trying To Rescue Kids In Kolar
ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಕೋಲಾರದ ಅರಹಳ್ಳಿ ಕೆರೆಗೆ ಮಹಿಳೆಯರು ಸೇರಿದಂತೆ ಮಕ್ಕಳು ಬಟ್ಟೆ ತೊಳೆಯಲು ಹೋಗಿದ್ದಾರೆ. ಈ ವೇಳೆ ಮಕ್ಕಳು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಮೊಹಮದಿ ಮತ್ತು ಸಲ್ಮಾ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಸಲ್ಮಾ ಅವರು ಬೆಂಗಳೂರಿಂದ ಬಂದಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com