8 ಟಿಕೆಟ್, 49 ಲಕ್ಷ ರೂ ವೆಚ್ಚ: ನಿಲ್ದಾಣದಲ್ಲಿ ವಿಮಾನ ಏರಲೂ ಬಿಡಲಿಲ್ಲ.. KLM Royal Dutch Airlines ವಿರುದ್ಧ ದೂರು!

ಕುಟುಂಬದೊಂದಿಗೆ ಪೆರು ದೇಶಕ್ಕೆ ಪ್ರವಾಸಕ್ಕೆಂದು ತೆರಳಲು ಸಿದ್ಧವಾಗಿದ್ದ ತಮಿಳುನಾಡಿನ ಕುಟುಂಬವೊಂದಕ್ಕೆ ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM Royal Dutch Airlines) ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿರುವ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಡೆದಿದೆ.
KLM Royal Dutch Airlines
ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್
Updated on

ಬೆಂಗಳೂರು: ಕುಟುಂಬವೊಂದು 49 ಲಕ್ಷ ರೂ. ನೀಡಿ 8 ಮಂದಿಯ ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಿದರೆ ಅಂತಿಮವಾಗಿ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಸ್ಥೆ ಸಿಬ್ಬಂದಿ ವಿಮಾನ ಏರಲೂ ಬಿಡದೇ ವಿವಾದ ಮೇಲೆ ಎಳೆದುಕೊಂಡಿದೆ.

ಹೌದು.. ಕುಟುಂಬದೊಂದಿಗೆ ಪೆರು ದೇಶಕ್ಕೆ ಪ್ರವಾಸಕ್ಕೆಂದು ತೆರಳಲು ಸಿದ್ಧವಾಗಿದ್ದ ತಮಿಳುನಾಡಿನ ಕುಟುಂಬವೊಂದಕ್ಕೆ ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM Royal Dutch Airlines) ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿರುವ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಡೆದಿದೆ.

ಈ ಘಟನೆ ಇದೀಗ ವಿಮಾನಯಾನ ವಲಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಯ ಸಿಇಒ ಮತ್ತು ಸಿಒಒ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೇವನಹಳ್ಳಿ ಸಿವಿಲ್ ಕೋರ್ಟ್​ ಆದೇಶಿಸಿದೆ.

KLM Royal Dutch Airlines
IPL 2026: Namma Metro-BMTC ಬಸ್‌ ಸಂಚಾರ ಅವಧಿ ವಿಸ್ತರಣೆ

ಏನಿದು ಘಟನೆ?

ತಮಿಳುನಾಡಿನ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯೊಂದರ ಅಧ್ಯಕ್ಷ ಜೆ.ಎಸ್. ಸತೀಶ್‌ ಕುಮಾರ್ ತಮ್ಮ ಕುಟುಂಬದ ಎಂಟು ಮಂದಿಗೆ ಪೆರು ಪ್ರವಾಸಕ್ಕೆ ನಿರ್ಧರಿಸಿದ್ದರು. ಅದರಂತೆ ಸುಮಾರು 49 ಲಕ್ಷ ರೂಪಾಯಿ ವೆಚ್ಚ ಮಾಡಿ ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು.

2024ರ ಜೂನ್ 19 ರಂದು ಬೆಂಗಳೂರಿನಿಂದ ವಿಮಾನ ಏರಲು ಸಿದ್ಧರಾಗಿದ್ದ ಇವರಿಗೆ, ಕೊನೆಯ ಕ್ಷಣದಲ್ಲಿ ಪೆರು ವೀಸಾ ಇಲ್ಲ ಎಂಬ ಕಾರಣ ನೀಡಿ ವಿಮಾನ ಏರಲು ಸಿಬ್ಬಂದಿ ತಡೆದಿದ್ದರು.

ಸತೀಶ್‌ ಕುಮಾರ್ ಅವರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಅಥವಾ ಷೆಂಗೆನ್ ವೀಸಾ ಹೊಂದಿದ್ದರೆ ಪೆರು ದೇಶಕ್ಕೆ ಪ್ರವೇಶಿಸಲು ಪ್ರತ್ಯೇಕ ವೀಸಾ ಅಗತ್ಯವಿಲ್ಲ. ಈ ನಿಯಮವಿದ್ದರೂ ಏರ್‌ಲೈನ್ಸ್ ಸಿಬ್ಬಂದಿ ಇದನ್ನು ತಪ್ಪಾಗಿ ಅರ್ಥೈಸಿ ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರೆಡ್ ಫ್ಲ್ಯಾಗ್

ಘಟನೆ ಬಳಿಕ ಕುಟುಂಬದವರು ಪ್ರತಿಭಟಿಸಿದಾಗ, ಏರ್‌ಲೈನ್ಸ್ ಸಂಸ್ಥೆಯು ಅವರ ವಿರುದ್ಧ ‘ರೆಡ್ ಫ್ಲ್ಯಾಗ್ (Internal Red-flagging)’ ಮಾಡಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸತೀಶ್‌ಕುಮಾರ್ ಅವರ ಮಗ ಸಿಂಗಾಪುರಕ್ಕೆ ತೆರಳಿದಾಗ ಪೆರುನಿಂದ ಗಡಿಪಾರು ಮಾಡಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ ವಿಚಾರಣೆ ಎದುರಿಸಬೇಕಾಯಿತು. ಈ ಅವಮಾನ ಮತ್ತು ಆರ್ಥಿಕ ನಷ್ಟದ ವಿರುದ್ಧ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.

KLM Royal Dutch Airlines
ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್; 'ಹೈ' ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆ..!

ಏನಿದು ರೆಡ್ ಫ್ಲ್ಯಾಗ್?

ಅಂತರಾಷ್ಟ್ರೀಯ ಪ್ರಯಾಣದಲ್ಲಿ ‘ರೆಡ್ ಫ್ಲ್ಯಾಗಿಂಗ್ (Red-flagging)’ ಎಂದರೆ ಒಬ್ಬ ಪ್ರಯಾಣಿಕನನ್ನು ‘ಹೆಚ್ಚಿನ ನಿಗಾ ವಹಿಸಬೇಕಾದ ವ್ಯಕ್ತಿ’ ಎಂದು ವಿಮಾನಯಾನ ಸಂಸ್ಥೆಗಳು ಅಥವಾ ವಲಸೆ ಅಧಿಕಾರಿಗಳ ಡೇಟಾಬೇಸ್‌ನಲ್ಲಿ ಗುರುತು ಮಾಡುವುದು.

ಇದು ಒಂದು ರೀತಿಯ ಡಿಜಿಟಲ್ ಎಚ್ಚರಿಕೆಯಾಗಿದ್ದು, ಪ್ರಯಾಣಿಕನು ಈ ಹಿಂದೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ, ಗಡಿಪಾರು (Deported) ಆಗಿದ್ದಾನೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಸಂಕೇತವನ್ನು ನೀಡುತ್ತದೆ.

ಒಮ್ಮೆ ಈ ರೀತಿ ‘ರೆಡ್ ಫ್ಲ್ಯಾಗ್’ ಮಾಡಿದರೆ, ಆ ಪ್ರಯಾಣಿಕನು ಯಾವುದೇ ದೇಶಕ್ಕೆ ಹೋದರೂ ವಿಮಾನ ನಿಲ್ದಾಣಗಳಲ್ಲಿ ತೀವ್ರ ವಿಚಾರಣೆ, ತಪಾಸಣೆ ಮತ್ತು ಪದೇ ಪದೇ ಬೋರ್ಡಿಂಗ್ ನಿರಾಕರಣೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ ಹೇಳಿಕೆ

ಅನ್ವಯವಾಗುವ ಎಲ್ಲಾ ಪ್ರಯಾಣ ಮತ್ತು ವಲಸೆ ನಿಯಮಗಳನ್ನು ಪಾಲಿಸುವುದು ಬದ್ಧವಾಗಿದೆ ಎಂದು ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ ಹೇಳಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪ್ರಯಾಣಿಕರು ನಿರ್ಗಮಿಸುವ ಮೊದಲು ಮಾನ್ಯ ಮತ್ತು ಸರಿಯಾದ ಪ್ರಯಾಣ ದಾಖಲೆಗಳನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆ ಒತ್ತಿ ಹೇಳಿದೆ. ಅದಾಗ್ಯೂ ಕೆಲವು ಪ್ರಯಾಣಿಕರು ಅನುಭವಿಸಿದ ಅನಾನುಕೂಲತೆಗೆ ಕೆಎಲ್‌ಎಂ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com