ಬೆಳಬೆಳಗ್ಗೆ ಕುಡಿದು ಚಾಲನೆ: 7 ಶಾಲಾ ವಾಹನ ಚಾಲಕರ ವಿರುದ್ಧ ಕೇಸ್ ದಾಖಲು; ಡಿಎಲ್‌ ರದ್ದಿಗೆ ಕ್ರಮ

ಶಾಲಾ ವಾಹನಗಳ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಜಿಲ್ಲೆಯಾದ್ಯಂತ ವಿಶೇಷ ಡ್ರೈವ್ ಅನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
7 school vehicle drivers booked for drunk driving
ಅಭಿಯಾನದ ಸಮಯದಲ್ಲಿ ಒಟ್ಟು 457 ಶಾಲಾ ವಾಹನ ಚಾಲಕರನ್ನು ತಡೆದು ತಪಾಸಣೆ ನಡೆಸಿದ್ದಾರೆ.
Updated on

ಶಿವಮೊಗ್ಗ: ಶಾಲೆಗಳು ಪುನರಾರಂಭವಾದ ಬೆನ್ನಲ್ಲೇ ಶಾಲಾ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಿವಮೊಗ್ಗ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಕುಡಿದು ವಾಹನ ಚಲಾಯಿಸಿದ ಏಳು ಶಾಲಾ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಾಲಾ ವಾಹನಗಳ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಜಿಲ್ಲೆಯಾದ್ಯಂತ ವಿಶೇಷ ಡ್ರೈವ್ ಅನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಯಾನದ ಸಮಯದಲ್ಲಿ ಒಟ್ಟು 457 ಶಾಲಾ ವಾಹನ ಚಾಲಕರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ 7 ಚಾಲಕರು ಕುಡಿದು ವಾಹನ ಚಲಾಯಿಸಿರುವುದು ದೃಢಪಟ್ಟಿದೆ. ಅವರ ವಿರುದ್ಧ ಡ್ರಂಕ್ & ಡ್ರೈವ್ ಪ್ರಕರಣ ದಾಖಲಿಸಲಾಗಿದೆ.

7 school vehicle drivers booked for drunk driving
ಮದ್ಯಪಾನ ಮಾಡಿ ಶಾಲಾ ವಾಹನ​ ಚಾಲನೆ: 36 ಮಂದಿ ಚಾಲಕರ ವಿರುದ್ಧ ಪ್ರಕರಣ ದಾಖಲು; ಪೋಷಕರು ಕಳವಳ

ಪ್ರಕರಣಗಳನ್ನು ದಾಖಲಿಸುವುದರ ಜೊತೆಗೆ, ಏಳು ಚಾಲಕರ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಶಿವಮೊಗ್ಗದ ಸಂಚಾರ ಠಾಣೆ ಪೊಲೀಸರು ಪತ್ರ ಬರೆದಿದ್ದಾರೆ.

ರಸ್ತೆ ಸುರಕ್ಷತೆಯನ್ನು ಬಲಪಡಿಸುವುದು ಮತ್ತು ಶಾಲಾ ವಾಹನಗಳ ಅಪಘಾತಗಳನ್ನು ತಡೆಗಟ್ಟುವ ಗುರಿಯನ್ನು ಈ ಡ್ರೈವ್ ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com