ಚಾಮರಾಜನಗರ: ಟೈಯರ್ ಸ್ಫೋಟಗೊಂಡು ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು, 50 ಮಂದಿಗೆ ಗಾಯ

ಟೈಯರ್ ಸ್ಪೋಟಗೊಂಡು KSRTC ಬಸ್ ಪಲ್ಟಿಯಾಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯ ಬೈಪಾಸ್ ಬಳಿ ನಡೆದಿದೆ.
Representation purpose only
ಸಂಗ್ರಹ ಚಿತ್ರ
Updated on

ಚಾಮರಾಜನಗರ: ಟೈಯರ್ ಸ್ಪೋಟಗೊಂಡು KSRTC ಬಸ್ ಪಲ್ಟಿಯಾಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯ ಬೈಪಾಸ್ ಬಳಿ ನಡೆದಿದೆ. ಮೃತರನ್ನು ಕೊಳ್ಳೇಗಾಲದ 60 ವರ್ಷದ ಪುಟ್ಟನಂಜಮ್ಮ, ಕುದೇರು ನಿವಾಸಿ 50 ವರ್ಷದ ಮಹೇಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Representation purpose only
ಮಂಗಳೂರು: ಸಿನಿಮೀಯ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯ ಕಾರು ಅಡ್ಡಗಟ್ಟಿ 20 ಲಕ್ಷ ರೂ. ದರೋಡೆ; ಪತ್ನಿ, ಮಗು ಅಪಹರಣ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com