15 ಲಕ್ಷ ರೂ ಲಾಟರಿ ಗೆದ್ದಿದ್ದೀರಿ ಎಂದು ಸಂದೇಶ: ಕೇರಳ ಸರ್ಕಾರದ ಲೋಗೋ ಬಳಸಿ, ಗದಗದಲ್ಲಿ ಭಾರೀ ಮೋಸ..!

ವಂಚಕರು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ರೂ.15 ಲಕ್ಷ ಲಾಟರಿ ಗೆದ್ದಿದ್ದೀರಿ ಎಂದು ತಿಳಿಸುತ್ತಾರೆ. ನಂತರ ಲಿಂಕ್ ಕ್ಲಿಕ್ ಮಾಡಿದವರಿಗೆ ಕೇರಳ ಸರ್ಕಾರದ ಚಿಹ್ನೆ ಹೊಂದಿರುವ ನಕಲಿ ಪ್ರಮಾಣಪತ್ರದ ಪಿಡಿಎಫ್ ರವಾನಿಸುತ್ತಾರೆ.
The document sent to many people’s mobile numbers claiming they won lottery
ಲಾಟರಿ ಗೆದ್ದಿದ್ದೀರೆಂದು ರವಾನಿಸಿರುವ ಫೋಟೋ.
Updated on

ಗದಗ: ಗದಗ ಜಿಲ್ಲೆಯಲ್ಲಿ ನಕಲಿ ಲಾಟರಿ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ವಂಚಕರ ಜಾಲವೊಂದು ಬೆಳಕಿಗೆ ಬಂದಿದೆ.

ಗದಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವರು ಮೊಬೈಲ್ ಸಂದೇಶಗಳ ಮೂಲಕ ಜನರಿಗೆ “ಲಾಟರಿ ಗೆದ್ದಿದ್ದೀರಿ” ಎಂದು ಹೇಳಿ ಹಣ ವಂಚಿಸುತ್ತಿರುವ ಘಟನೆಗಳು ವರದಿಯಾಗಿವೆ.

ವಂಚಕರು ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ರೂ.15 ಲಕ್ಷ ಲಾಟರಿ ಗೆದ್ದಿದ್ದೀರಿ ಎಂದು ತಿಳಿಸುತ್ತಾರೆ. ನಂತರ ಲಿಂಕ್ ಕ್ಲಿಕ್ ಮಾಡಿದವರಿಗೆ ಕೇರಳ ಸರ್ಕಾರದ ಚಿಹ್ನೆ ಹೊಂದಿರುವ ನಕಲಿ ಪ್ರಮಾಣಪತ್ರದ ಪಿಡಿಎಫ್ ರವಾನಿಸುತ್ತಾರೆ. ಇದರಿಂದ ಜನರು ಲಾಟರಿ ನಿಜವೆಂದು ನಂಬುವಂತೆ ಮಾಡುತ್ತಿದ್ದಾರೆ.

ಬಳಿಕ ಬಹುಮಾನ ಹಣ ಪಡೆಯಲು ರೂ.8,000 ಪ್ರಾಸೆಸಿಂಗ್ ಶುಲ್ಕ ಪಾವತಿಸಬೇಕೆಂದು ತಿಳಿಸುತ್ತಾರೆ. ಇದನ್ನು ನಂಬಿದ ಹಲವರು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿ, ವಂಚನೆಗೊಳಗಾಗಿದ್ದಾರೆ.

ರೋಣ ಪಟ್ಟಣದ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

The document sent to many people’s mobile numbers claiming they won lottery
ದುಬೈ ಬಿಗ್ ಟಿಕೆಟ್ ಲಕ್ಕಿ ಡ್ರಾ: ಉಡುಪಿಯ ಯುವಕನಿಗೆ ಹೊಡೆಯಿತು ಭರ್ಜರಿ 49 ಕೋಟಿ ರೂ ಲಾಟರಿ!

ವ್ಯಕ್ತಿಯ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವರು ತಮಗೂ ಇದೇ ರೀತಿಯ ಸಂದೇಶಗಳು ಬಂದಿವೆ ಎಂದು ತಿಳಿಸಿದ್ದಾರೆ.

ಹಲವರು ಹಣ ಕಳೆದುಕೊಂಡಿದ್ದರೂ, ನಾಚಿಕೆ ಅಥವಾ ಭಯದಿಂದ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಈ ಕುರಿತು ಗದಗ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಅಧಿಕೃತ ದೂರುಗಳು ಬಂದಿಲ್ಲ. ಆದರೆ, ಸೈಬರ್ ವಂಚನೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಅಭಿಯಾನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅನುಮಾನಾಸ್ಪದ ಲಾಟರಿ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com