

ಬೆಂಗಳೂರು: ತಾಲಿಬಾನ್ ಮತ್ತು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (TTP) ಗೆ ಸಂಬಂಧಿಸಿದ ಭಯೋತ್ಪಾದನೆ ಮತ್ತು ನೇಮಕಾತಿ ಪ್ರಕರಣದಲ್ಲಿ ಮಹಾರಾಷ್ಟ್ರ ನಿವಾಸಿ ಹಮ್ರಾಜ್ ವೋರ್ಷಿದ್ ಶೇಖ್ ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ವಿಶೇಷ ನ್ಯಾಯಾಲಯವು ನಿಷೇಧಿತ ದೋಷಿ ಎಂದು ತೀರ್ಪು ನೀಡಿದ್ದು 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು 63,000 ದಂಡ ವಿಧಿಸಿದೆ.
ವಿಚಾರಣೆ ವೇಳೆ ಹಮ್ರಾಜ್ ತಪ್ಪೊಪ್ಪಿಕೊಂಡಿದ್ದನು. ಈ ಪ್ರಕರಣವು ಜಿಹಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳ ಹರಡುವಿಕೆ ಮತ್ತು ಭಾರತದಲ್ಲಿ ತಾಲಿಬಾನ್ ಮತ್ತು TTP ಸಂಬಂಧಿತ ಉದ್ದೇಶಗಳನ್ನು ಬೆಂಬಲಿಸಲು ದುರ್ಬಲ ಯುವಕರನ್ನು ನೇಮಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಲಾಗುತ್ತಿತ್ತು ಎಂದು ಹೇಳಿದ್ದನು. NIA ವಿಶೇಷ ನ್ಯಾಯಾಲಯವು ಹಮ್ರಾಜ್ ಗೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ತಪ್ಪಿತಸ್ಥನೆಂದು ತೀರ್ಪು ನೀಡಿದೆ. IPC ಸೆಕ್ಷನ್ 120B ಮತ್ತು 121A ಅಡಿಯಲ್ಲಿ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ
ತಾಲಿಬಾನ್ ಮತ್ತು ಟಿಟಿಪಿ ಸಿದ್ಧಾಂತಕ್ಕೆ ಸಂಬಂಧಿಸಿದ ಮೂಲಭೂತೀಕರಣ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎನ್‌ಐಎ ಏಪ್ರಿಲ್ 2023ರಲ್ಲಿ ಪ್ರಕರಣವನ್ನು ದಾಖಲಿಸಿತು. ಅಕ್ಟೋಬರ್ 2023ರಲ್ಲಿ ಸಂಸ್ಥೆ ಹಮ್ರಾಜ್ ಮತ್ತು ಸಹ-ಆರೋಪಿ ಮೊಹಮ್ಮದ್ ಆರಿಫ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.
Advertisement