ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌! ಮರುಪರಿಶೀಲನೆಗೆ ಮತ್ತೆ ಗಡುವು ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ

ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರವು ಮತ್ತೆ ಒಂದು ತಿಂಗಳ ಕಾಲಾವಕಾಶವನ್ನು ವಿಸ್ತರಿಸಿದೆ.ಆ ಕುರಿತ ವರದಿ ಇಲ್ಲಿದೆ:
Good news for Gruha Jyothi beneficiaries
ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌!AI Image
Updated on: 

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳಿಗೆ ಗುಡ್‌ನ್ಯೂಸ್‌! ಯಾಕಂದ್ರೆ, ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆ ಮಾಲೀಕರು ಮತ್ತು ಬಾಡಿಗೆದಾರರ ದಾಖಲೆಗಳ ಮರುಪರಿಶೀಲನೆ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರವು ಮತ್ತೆ ಒಂದು ತಿಂಗಳ ಕಾಲಾವಕಾಶವನ್ನು ವಿಸ್ತರಿಸಿದ್ದು, ಕೊನೆಯ ದಿನಾಂಕವನ್ನು ಅಕ್ಟೋಬರ್ 31, 2026 ರವರೆಗೆ ನಿಗದಿಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಗಡುವು ವಿಸ್ತರಣೆಗೆ ಕಾರಣಗಳೇನು?

  • ಬಾಕಿ ಉಳಿದಿರುವ ಪ್ರಕರಣಗಳು: ಜುಲೈ 1 ರಿಂದ ಆರಂಭವಾಗಿದ್ದ ಈ ಮನೆ-ಮನೆ ಸಮೀಕ್ಷೆಯು ಅಂತಿಮ ಗಡುವು ಸೆಪ್ಟೆಂಬರ್ 30 ಕ್ಕೆ ನಿಗದಿ ಆಗಿತ್ತು. ಆದರೆ, ಶೇ. 98 ರಷ್ಟು ಪೂರ್ಣಗೊಂಡಿದ್ದರೂ, ಇನ್ನುಳಿದ ಕೆಲವು ಕಡೆಗಳಲ್ಲಿ ಪರಿಶೀಲನೆ ಬಾಕಿ ಇತ್ತು. ಹಾಗಾಗಿಯೇ, ಈ ವಿಸ್ತರಣೆ ನಡೆದಿದೆ.

  • ವಿಶೇಷ ಪ್ರಕರಣಗಳ ಮರುಪರಿಶೀಲನೆ: ಪ್ರಮುಖವಾಗಿ ಮನೆಗಳಿಗೆ ಬೀಗ ಹಾಕಿರುವುದು, ಫಲಾನುಭವಿಗಳು ಲಭ್ಯವಿಲ್ಲದಿರುವುದು, ಬಾಡಿಗೆದಾರರು ಅಥವಾ ಮಾಲೀಕರು ಮಾಹಿತಿ ನೀಡಲು ನಿರಾಕರಿಸಿರುವ ಪ್ರಕರಣಗಳು ಹಾಗೂ ಖಾಲಿ ಇರುವ ಮನೆಗಳ ಭೌತಿಕ ಪರಿಶೀಲನೆಯನ್ನು ಪೂರ್ಣಗೊಳಿಸಲು ಈ ಹೆಚ್ಚುವರಿ ಸಮಯ ಅಗತ್ಯವಾಗಿತ್ತು.

ಮುಂದುವರೆದು, ವಿದ್ಯುತ್ ಕಂಪನಿಗಳ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳಿಂದ ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಿ ಸೇವಾಸಿಂಧು ಪೋರ್ಟಲ್ ನಲ್ಲಿ ನವೀಕರಿಸುತ್ತಿದ್ದಾರೆ: ಅದುವೇ, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ವಿವರ, ಅರ್ಜಿದಾರರ ಇತ್ತೀಚಿನ ಭಾವಚಿತ್ರ ಹಾಗೂ ಪ್ರವರ್ಗ, ಫಲಾನುಭವಿಗಳ ಆದಾಯ ತೆರಿಗೆ ಪಾವತಿ ಮತ್ತು ವೃತ್ತಿ ಮಾಹಿತಿ, ಮನೆಗಳ ಜಕಾತಿ ಬದಲಾವಣೆ ಹಾಗೂ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಮನೆಗಳ ವಿವರಗಳು.

Good news for Gruha Jyothi beneficiaries
ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಹಾಗಾದ್ರೆ, ಅರ್ಹ ಫಲಾನುಭವಿಗಳು ಮಾಡಬೇಕಾದುದೇನು?

  • ದಾಖಲೆಗಳನ್ನು ಸಿದ್ಧವಾಗಿಡಿ: ನಿಮ್ಮ ಮನೆಗೆ ಭೇಟಿ ನೀಡುವ ಸಿಬ್ಬಂದಿಗೆ ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು. ಒಂದು ವೇಳೆ ನೋಂದಾಯಿತ ಫಲಾನುಭವಿ ಲಭ್ಯವಿಲ್ಲದಿದ್ದರೆ, ಕುಟುಂಬದ ಹಿರಿಯ ಸದಸ್ಯರು ಘೋಷಣಾ ಪತ್ರಕ್ಕೆ ಸಹಿ ಮಾಡಬಹುದು.

  • ಮನೆ ಬೀಗ ಹಾಕಿದ್ದರೆ: ಬೀಗ ಹಾಕಿರುವ ಮನೆಗಳಿಗೆ ಸಿಬ್ಬಂದಿ ವಿವಿಧ ಸಮಯಗಳಲ್ಲಿ ಒಟ್ಟು 3 ಬಾರಿ ಭೇಟಿ ನೀಡಲಿದ್ದಾರೆ. ಈ ವೇಳೆ ಜಿಪಿಎಸ್ ಲೋಕೇಶನ್ ದಾಖಲಿಸಿ, ಫಲಾನುಭವಿಯ ಮೊಬೈಲ್‌ಗೆ ಮೀಟರ್ ರೀಡರ್ ಹೆಸರು ಹಾಗೂ ಫೋನ್ ಸಂಖ್ಯೆ ಇರುವ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಗ್ರಾಹಕರು ಅವರನ್ನು ಸಂಪರ್ಕಿಸಿ ಪರಿಶೀಲನೆ ಪೂರ್ಣಗೊಳಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com