ಅಸ್ಪೃಶ್ಯತೆಯಿಂದ ಹಿಂದೂ ಧರ್ಮ ಅಳಿವಿನ ಹಾದಿಯಲ್ಲಿದೆ: ಮಲ್ಲಿಕಾರ್ಜುನ ಖರ್ಗೆ

ಹಿಂದೂ ಧರ್ಮದಲ್ಲಿನ ಅನ್ಯಾಯ ಮತ್ತು ಅಸ್ಪೃಶ್ಯತೆಯನ್ನು ಉಲ್ಲೇಖಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, 1935ರಲ್ಲಿ ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದರು ಎಂದು ಖರ್ಗೆ ಸ್ಮರಿಸಿದರು.
Mallikarjuna Kharge
ಮಲ್ಲಿಕಾರ್ಜುನ ಖರ್ಗೆ
Updated on: 

ಕಲಬುರಗಿ: ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯಿಂದ ಹಿಂದೂ ಧರ್ಮ ಅಳಿವಿನ ಹಾದಿಯಲ್ಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿಜಯದಶಮಿಯ ಅಂಗವಾಗಿ ಮೊನ್ನೆ ಮಂಗಳವಾರ ಇಲ್ಲಿನ ಬುದ್ಧ ವಿಹಾರದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಆಯೋಜಿಸಿದ್ದ 70ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದಲ್ಲಿನ ಅನ್ಯಾಯ ಮತ್ತು ಅಸ್ಪೃಶ್ಯತೆಯನ್ನು ಉಲ್ಲೇಖಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, 1935ರಲ್ಲಿ ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದರು ಎಂದು ಖರ್ಗೆ ಸ್ಮರಿಸಿದರು.

Mallikarjuna Kharge
ನಾಳೆ ಪ್ರಧಾನಿ ಜೊತೆಗೆ ಖರ್ಗೆ ಮಾತುಕತೆ: SIR, ಕ್ಷೇತ್ರ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ!

ಇಂದಿಗೂ ದೇಶದಲ್ಲಿ ಜಾತೀಯತೆ ನಿರ್ಮೂಲನೆಯಾಗಿಲ್ಲ. ಉತ್ತರಾಖಂಡದಲ್ಲಿ ನಾನು ಭಾಷಣ ಮಾಡಿದ ಸ್ಥಳವನ್ನೇ ಎರಡು ದಿನಗಳ ಬಳಿಕ ತೊಳೆದು ಸ್ವಚ್ಛಗೊಳಿಸಲಾಯಿತು. ತಕ್ಷಣವೇ ತೊಳೆದಿದ್ದರೆ, ಕೇವಲ ಕೊಳೆಯನ್ನು ಸ್ವಚ್ಛಗೊಳಿಸಲು ಹೀಗೆ ಮಾಡಿದ್ದಾರೆ ಎಂದು ಭಾವಿಸಬಹುದಿತ್ತು. ಆದರೆ, ಎರಡು ದಿನಗಳ ಬಳಿಕ ಆ ಸ್ಥಳವನ್ನು ತೊಳೆಯುವಂತಹ ಮೂಢನಂಬಿಕೆ ಎಂಥದ್ದು ಇದು ಮಾನಸಿಕ ಹಿಂಸೆಯಲ್ಲವೇ ಎಂದು ಖರ್ಗೆ ಪ್ರಶ್ನಿಸಿದರು.

ನೀವು ಮಾರ್ಟಿನ್ ಅವರನ್ನು ಆಹ್ವಾನಿಸುತ್ತೀರಿ, ಮೊಹಮ್ಮದ್ ಅವರನ್ನು ಆಹ್ವಾನಿಸುತ್ತೀರಿ, ಆದರೆ ಮಲ್ಲಿಕಾರ್ಜುನನನ್ನು ಆಹ್ವಾನಿಸುವುದಿಲ್ಲ. ನನ್ನ ಜನರನ್ನು ಏಕೆ ಹೊರಗಿಡುತ್ತೀರಿ? ನಮಗೆ ನೀರು ಮತ್ತು ಶಿಕ್ಷಣವನ್ನು ಏಕೆ ಒದಗಿಸುವುದಿಲ್ಲ ನಾವೇನು ಮನುಷ್ಯರಲ್ಲವೇ ಹಿಂದೂ ಧರ್ಮದೊಳಗೆ ವಿಭಜನೆಗಳು ಉಂಟಾಗಲು ಇದೇ ಕಾರಣವಲ್ಲವೇ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

Mallikarjuna Kharge
'ಮೋದಿಯವರೇ, ದಯವಿಟ್ಟು ನೆನಪಿಸಿಕೊಳ್ಳಿ'; ನೀವು ಈಗಲೇ ಮಹಿಳಾ ಮೀಸಲಾತಿ ಜಾರಿಗೊಳಿಸಬಹುದು: ಮಲ್ಲಿಕಾರ್ಜುನ ಖರ್ಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com