RSS ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ: ಪ್ರಿಯಾಂಕ್ ಖರ್ಗೆಆರ್ಎಸ್ಎಸ್ ಸಂಬಂಧಿತ ಕಾನೂನು ನೋಂದಣಿ ವಿಚಾರವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಸಂಸ್ಥೆ ದೇಣಿಗೆಗಳನ್ನು ಸ್ವೀಕರಿಸುತ್ತಿದ್ದರೂ ಸಂಬಂಧಿತ ಕಾನೂನುಗಳಡಿ ನೋಂದಾಯಿತವಾಗಿಲ್ಲ ಎಂದು ಹೇಳಿದರು.
ಮೆಗಾ ರೈಲು ಕೋಚಿಂಗ್ ಟರ್ಮಿನಲ್ ಯೋಜನೆ ದೇವನಹಳ್ಳಿಯಿಂದ ಯಲಹಂಕಕ್ಕೆ ಶಿಫ್ಟ್ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ಎಕ್ಸ್ಪ್ರೆಸ್ ರೈಲುಗಳ ಹೆಚ್ಚುವರಿ ಪ್ರಾಯೋಗಿಕ ನಿಲುಗಡೆಗೆ ಹಸಿರು ನಿಶಾನೆ ತೋರಿಸಿದ ನಂತರ ಮಾತನಾಡಿದ ಸಚಿವರು, “ಟರ್ಮಿನಲ್ಗಾಗಿ ಅಂತಿಮ ಸ್ಥಳ ಸಮೀಕ್ಷೆಯನ್ನು ರೈಲ್ವೆ ಮಂಡಳಿಯು ಅನುಮೋದಿಸಿದೆ” ಎಂದು ತಿಳಿಸಿದರು.
ಸ್ವಚ್ಛತೆಗೆ ಆದ್ಯತೆ ನೀಡದ ಹೋಟೆಲ್'ಗಳ ವಿರುದ್ಧ GBA ಕ್ರಮ: ಜಯನಗರದ ಜನಪ್ರಿಯ ಬಿರಿಯಾನಿ ಕೇಂದ್ರಕ್ಕೆ ಭಾರೀ ದಂಡ..! Videoಶುಚಿತ್ವ ಕಾಯ್ದುಕೊಳ್ಳದೆ ಇರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ (ಎಸ್ಡಬ್ಲ್ಯೂಎಂ) ತಂಡ ಹೋಟೆಲ್'ಗೆ ರೂ.1 ಲಕ್ಷ ದಂಡ ವಿಧಿಸಿದೆ.
ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ರೂ ನಗದು, 500 ಗ್ರಾಂ ಚಿನ್ನ ದರೋಡೆ!ನಾಲ್ವರು ಆರೋಪಿಗಳಲ್ಲಿ ಇಬ್ಬರು ತಾವು ಯಲಹಂಕ ಪೊಲೀಸ್ ಠಾಣೆಗೆ ಸೇರಿದ ಪೊಲೀಸರು ಎಂದು ಹೇಳಿಕೊಂಡಿದ್ದು, ಈ ಪ್ರದೇಶದಲ್ಲಿ ಕಳ್ಳತನಗಳು ಹೆಚ್ಚು ನಡೆಯುತ್ತಿವೆ. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿ ಉದ್ಯಮಿ ಮನೆ ಪ್ರವೇಶಿಸಿದ್ದಾರೆ.
ಬೆಂಗಳೂರು: ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ HDFC ಬ್ಯಾಂಕ್ ಉದ್ಯೋಗಿ ಸಾವು; Videoಮೃತರನ್ನು ಯೋಗೇಶ್ವರಿ ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಹೊರಭಾಗದ ಮೂಲದವರಾಗಿದ್ದು, ನಗರದಲ್ಲಿರುವ ಪಿಜಿ ವಸತಿಯಲ್ಲಿ ವಾಸಿಸುತ್ತಿದ್ದರು. ರಾಜಾಜಿನಗರದ ಎಚ್ಡಿಎಫ್ಸಿ ಹೋಂ ಲೋನ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
Guarantee scheme: ಅರ್ಹವಲ್ಲದ ಫಲಾನುಭವಿಗಳ ಕೈಬಿಟ್ಟು ಹಣ ಉಳಿಸಲು ಸರ್ಕಾರ ಮುಂದು; ಈ ಬಾರಿಯ ಬಜೆಟ್ನಲ್ಲಿ ಅನುದಾನ ಕಡಿತ?2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದೇ ವರ್ಷ ಪೂರಕ ಬಜೆಟ್ನಲ್ಲಿ ಎಂಟು ತಿಂಗಳಿಗೆ ರೂ.35,410 ಕೋಟಿ ಅನುದಾನ ಮೀಸಲಿಡಲಾಗಿತ್ತು.
SSLC, PUC Exam 2026: ಪರೀಕ್ಷೆ ಜೊತೆಗೆ ಫಲಿತಾಂಶ ದಿನಾಂಕ ಪ್ರಕಟ; 16 ಲಕ್ಷ ವಿದ್ಯಾರ್ಥಿಗಳು ನೋಂದಣಿಪರೀಕ್ಷೆಗಳು ಸುಗಮ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಕೈಗೊಂಡಿರುವ ಪ್ರಮುಖ ಕ್ರಮಗಳನ್ನು ವಿವರಿಸಿದರು.
ರೈತರ ಹಿತ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯಬ್ಯಾಂಕುಗಳು ರೈತರಿಗೆ ಭೂಮಿಯ ಮೌಲ್ಯದ ಶೇ.75ರಷ್ಟು ಕೃಷಿ ಸಾಲ ನೀಡಬೇಕು, ರೈತರ ಪುತ್ರರನ್ನು ವಿವಾಹವಾಗುವ ಹುಡುಗಿಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.20 ಮೀಸಲಾತಿ ನೀಡಬೇಕು ಎಂದು ಮನವಿ ಮಡಿದರು.
News wrap of the day 17-02-2026 | Muda case: CS ಶಾಲಿನಿ ರಜನೀಶ್ ವಿರುದ್ಧ ಸ್ನೇಹಮಯಿ ಕೃಷ್ಣ ಆರೋಪ, ಆಡಿಯೋ ಬಿಡುಗಡೆ; ನಾಯಿ, ನಾಯಕತ್ವ: ಮಹದೇವಪ್ಪ ಹೇಳಿಕೆಗೆ DK Suresh ಪ್ರತಿಕ್ರಿಯೆ ಏನು?
ಅಸಹಜ ಲೈಂಗಿಕ ದೌರ್ಜನ್ಯ ಕೇಸ್: MLC ಸೂರಜ್ ರೇವಣ್ಣಗೆ ಮತ್ತೊಂದು ಶಾಕ್ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಕೈಬಿಡುವಂತೆ JDS ಎಂಎಲ್ಸಿ ಸೂರಜ್ ರೇವಣ್ಣ ಕೋರಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾ ಮಾಡಿದೆ.
'ಕರಾವಳಿ' ಹೂಡಿಕೆ ವಿವಾದ: ಪ್ರಿಯಾಂಕ್ ಖರ್ಗೆ ಸಹಜವಾಗಿ ಹೇಳಿದ್ದಾರೆ, ಆದರೆ ದಕ್ಷಿಣ ಕನ್ನಡ ಬದಲಾಗುತ್ತಿದೆ; ಪರಮೇಶ್ವರ್ರಾಜಕೀಯ ವಿವಾದದ ಬೆನ್ನಲ್ಲೇ ಕರಾವಳಿ ಪ್ರದೇಶದಲ್ಲಿ ಶಾಂತಿ ಮರಳುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಅಪರಾಧಗಳು ಮತ್ತು ಮಾದಕ ದ್ರವ್ಯ ಸಂಬಂಧಿತ ಅಪರಾಧಗಳು ಸೇರಿದಂತೆ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದರು.
ಕರ್ನಾಟಕದ ಯಾವ ಶಾಸಕನಿಗೂ ಕ್ಷೇತ್ರದ ಅಭಿವೃದ್ಧಿಯನ್ನು ಸೋಮಣ್ಣನ ತರ ಮಾಡೋಕೆ ಸಾಧ್ಯವಿಲ್ಲ: ಸಚಿವ ಜಮೀರ್ ಪ್ರಶಂಸೆಬೆಂಗಳೂರಿನ ವಿಜಯನಗರ-ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನೂತನ ರಸ್ತೆ ಮೇಲ್ಸೇತುವೆಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದು ಲೋಕಾರ್ಪಣೆಗೊಳಿಸಿದರು. ಈ ರಸ್ತೆ ಮೇಲ್ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು.
ಮಂಗಳೂರು: ಅತೀ ವೇಗದ ಬೈಕ್ ಡಿಕ್ಕಿಗೆ ಕಂಬವೇ ಎರಡು ತುಂಡು; ಎದೆ ಝಲ್ ಎನಿಸೋ ದೃಶ್ಯ, Video!ಮಂಗಳೂರಿನ ಉಳ್ಳಾಲ ಪ್ರದೇಶದಲ್ಲಿ ಅತಿವೇಗದ ಚಾಲನೆಯ ಅಪಾಯಕಾರಿ ದೃಶ್ಯವೊಂದು ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಬೈಕ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಹೈಕೋರ್ಟ್ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣದ ಸ್ವರೂಪ ಮತ್ತು ದಾಖಲೆಗಳನ್ನು ಪರಿಗಣಿಸಿ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನ ಐತಿಹಾಸಿನ ಅಲಸೂರು ಕೆರೆ: 20 ವರ್ಷಗಳ ನಂತರ ಹೂಳೆತ್ತುವ ಕಾರ್ಯ ಆರಂಭಸುಮಾರು ಎರಡು ದಶಕಗಳ ನಂತರ ಕೆರೆಯ ಸಂಪೂರ್ಣ ಡಿಸಿಲ್ಟಿಂಗ್ (ಹೂಳು ತೆಗೆಯುವ) ಕಾರ್ಯವನ್ನು ರಾಷ್ಟ್ರೀಯ ವಿಪತ್ತು ಶಮನ ನಿಧಿ (NDMF) ಅಡಿಯಲ್ಲಿ 4 ಕೋಟಿ ರೂಪಾಯಿ ಅನುದಾನದಿಂದ ಕೈಗೊಳ್ಳಲಾಗಿದೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!